ಧಾರ್ಮಿಕ ಹಬ್ಬ ಆಚರಣೆ ಹಿನ್ನೆಲೆ ಶಾಂತಿ ಸಭೆ

sabhe
Published on

ಸುಳ್ಯ: ವಿವಿಧ ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಶಾಂತಿ ಸಭೆ ನಡೆಸಲಾಗಿ ಸಾರ್ವಜನಿಕರು ಕೆಲವೊಂದು ಅಗತ್ಯ ಸಲಹೆ ಸೂಚನೆ ಪಾಲಿಸುವಂತೆ ವಿನಂತಿಸಲಾಯಿತು.

ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹಬ್ಬ ಆಚರಣೆ ಸಂದರ್ಭ ಸಂಘಟಕರು, ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿ, ಕಾನೂನು ಸುವ್ಯವಸ್ಥೆಗೆ ಪೂರಕವಾಗಿ ಹಬ್ಬ ಆಚರಿಸುವಂತೆ ಸೂಚನೆ ನೀಡಿದರು.

ಮುಖಂಡರುಗಳಾದ ಬೂಡು ರಾಧಾಕೃಷ್ಣ ರೈ, ಬುದ್ಧ ನಾಯ್ಕ, ಸುನೀಲ್ ಕೇರ್ಪಳಶಿ, ಪ್ರಸಾದ್ ಕೆ., ಸುರೇಶ್ ಕುಮಾರ್ ಎಂ.,ಬಾಲಚಂದ್ರ ಜಿ.ಕೆ., ರಾಜು ಪಂಡಿತ್, ಕೆ.ಶಿವನಾಥ್ ರಾವ್ ಹಳೆಗೇಟು, ಹರಿಪ್ರಸಾದ್ ಎಲಿಮಲೆ, ರವಿಚಂದ್ರ ಕೆ., ಯೋಗರಾಜ್ ಬಿ., ಕೌಶಿಕ್ ಎಸ್., ಶಶಿಧರ ನಾಯರ್ ಕೆ., ಬಿ.ರಾಘವ ರಾವ್, ಯಶವಂತ ಎಂ.ಸಿ., ನಿತಿನ್ ಬಿ.ಟಿ., ಹರಿಪ್ರಸಾದ್ ಎಲಿಮಲೆ, ಸನತ್ ಪಿ.,ಪ್ರಕಾಶ್, ರತ್ನಾಕರ ರೈ, ಭರತ್ ಪಿಂಡಿಮನೆ, ಸೋಮಶೇಖರ ಪೈಕ, ಲತೀಶ್ ಗುಂಡ್ಯ, ವರ್ಷಿತ್ ಚೊಕ್ಕಾಡಿ, ಸರೋಜಿನಿ ಪೆಲ್ತಡ್ಕ, ಪಿ.ಎಸ್.ಗಂಗಾಧರ್, ಶಶಿಧರ ಎಂ.ಜೆ., ನಿತಿನ್, ರಾಜೇಶ್ ರೈ ಉಬರಡ್ಕ, ಡಿ.ಎಸ್.ಗಿರೀಶ್, ರಾಮಚಂದ್ರ ಪಿ.ಕೆ., ಪ್ರಭಾಕರನ್ ನಾಯರ್, ಗಿರಿಜಾ ಶಂಕರ್, ಲತಾ ಪ್ರಸಾದ್ ಕುದ್ಪಾಜೆ, ಕೆಪಿ ಜಾನಿ, ಇಕ್ಬಾಲ್ ಎಲಿಮಲೆ, ಕೆ.ಎಸ್.ಉಮ್ಮರ್, ಅಬ್ದುಲ್ ಮಜೀದ್ ಕೆ.ಬಿ., ಹಮೀದ್ ಅಡ್ಕಾರು, ಅಬ್ದುಲ್ಲಾ ಸೂಫಿ ಎಲಿಮಲೆ, ಅಶ್ರಫ್ ಜಿ., ಅಬ್ದುಲ್ ಸಮದ್ ಪಿ.ಎಂ., ಸಿ.ಪಿ.ಅಬ್ದುಲ್ ರಝಾಕ್, ಮಹಮ್ಮದ್ ಕುಂಞ ಗೂನಡ್ಕ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net