ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಜಾನಪದ ಉಳಿವು

folk
Published on

ಕುಂದಾಪುರ: ಜಾನಪದ ನಮ್ಮ ದೇಶದ ಅಪೂರ್ವ ಸಂಪತ್ತು. ಇದನ್ನು ಉಳಿಸಿ ಬೆಳೆಸಬೇಕು. ಸಂಕ್ರಾತಿಯನ್ನು ರಂಗೋಲಿ ಹಾಕುವ ಮೂಲಕ ಮನೆಗೆ ಸ್ವಾಗತಿಸುತ್ತಾರೆ, ಇದಕ್ಕೆ ಧಾರ್ಮಿಕ ಹಿನ್ನೆಲೆಯೊಂದಿಗೆ ಸಾಂಸ್ಕೃತಿಕ ಪರಂಪರೆಯಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ಹೇಳಿದರು.

ಕೊರವಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಂಭಾಗಣದಲ್ಲಿ ಕನ್ನಡ ಜಾನಪದ ಪರಿಷತ್, ಉಡುಪಿ ಜಿಲ್ಲಾ ಘಟಕ, ಕಜಾಪ ಕುಂದಾಪುರ ತಾಲೂಕು ಹಾಗೂ ರೋಟರಿ ಸಮುದಾಯ ದಳ ಕೊರವಡಿ ಆಶ್ರಯದಲ್ಲಿ ಸಂಕ್ರಾತಿ ಜಾನಪದ ಸಂಭ್ರಮ ಮಹಿಳೆಯರಿಗಾಗಿ ಉಡುಪಿ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಮಂಗಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷ ಸತೀಶ್ ಎಂ.ನಾಯ್ಕ, ಸಮುದಾಯ ದಳ ಕೊರವಡಿ ಅಧ್ಯಕ್ಷ ಕೆ.ಸುರೇಶ್ ವಿಠಲವಾಡಿ, ಸ್ಥಾಪಕ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಪ್ರಭು ಕರ್ವಾಲು, ನರಸಿಂಹ ನಾಯಕ್, ತೀರ್ಪುಗಾರರಾದ ಸಿಂಧು ಐತಾಳ, ರವಿ ಕಟ್ಕೆರೆ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಅಧ್ಯಕ್ಷೆ ಸುಪ್ರಿತಾ ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net