ಆಧ್ಯಾತ್ಮಿಕ ಕಾರ್ಯಗಳಿಂದ ಧರ್ಮ ಉಳಿವು: ಮನೋಹರ್ ಮಠದ್ ಅನಿಸಿಕೆ

Kdb_Religion
Published on

ಕಡಬ: ಹಿಂದು ಮನೆಗಳಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳು ನಿರಂತರ ನಡೆದಾಗ ಧರ್ಮ ಉಳಿಯುತ್ತದೆ. ಕೊಯಿಲ ಗ್ರಾಮದ ಪ್ರತಿ ಮನೆಯಲ್ಲಿ ಅತೂರು ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾರ್ಗದರ್ಶನದ ಮೂಲಕ ಗ್ರಾಮ ವಿಕಾಸ ಸಂಕಲ್ಪದಡಿಯಲ್ಲಿ ನಡೆಯುವ ಧರ್ಮ ಕಾರ್ಯಗಳು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ದೇವಾಲಯಗಳ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ಹೇಳಿದರು.

ಕೆಮ್ಮಾರ ಸಂಜೀವ ನೇಕಾರರ ನಿವಾಸದಲ್ಲಿ ನಡೆದ ಕೆಮ್ಮಾರ_ ಗೋಕುಲನಗರ ಬೈಲುವಾರು ಭಜನೆಯಲ್ಲಿ ಮಾತನಾಡಿದರು. ಕೊಯಿಲ ಗ್ರಾಮದ ದೇವಸ್ಥಾನ ಕೇಂದ್ರಿತ ಧಾರ್ಮಿಕ, ಸಾಮಾಜಿಕ ಚಟುವಟಿಕೆ ಮುನ್ನಡೆಸಲು ಗ್ರಾಮವನ್ನು ವಿವಿಧ ಪ್ರದೇಶವನ್ನು ಬೈಲುವಾರುವನ್ನಾಗಿಸಿ ವಿಂಗಡಿಸಿರುವುದು, ಬೈಲುವಾರು ಮನೆಗಳಲ್ಲಿ ಅಂಗಳದಲ್ಲಿ ಭಜನೆ, ಅಂಗಳದಲ್ಲಿ ಊಟ, ಯೋಗ, ಧಾರ್ಮಿಕ ಶಿಕ್ಷಣ, ಮನೆ_ಮನೆಗಳಲ್ಲಿ ಮಕ್ಕಳಿಂದ ಶಾರದ ಪೂಜೆ, ತುಳಸಿ ಪೂಜೆ ನಡೆಯುತ್ತಿರುವುದು ಸ್ವಾಭಿಮಾನ, ಸಾಮರಸ್ಯಕ್ಕೆ ಮುನ್ನುಡಿ ಬರೆದಿದೆ ಎಂದರು.

ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಆಡಳಿತ ಸಮಿತಿ ನಿಕಟಪೂರ್ವ ಸದಸ್ಯ ಪ್ರಸನ್ನ ದರ್ಬೆ, ಅತೂರು ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಬೈಲುವಾರು ಸಮಿತಿ ಪ್ರಮುಖರಾದ ಚೈತ್ರಾ ಬಡ್ಡಮೆ, ರಾಮಣ್ಣ ಬಡ್ಡಮೆ ಉಪಸ್ಥಿತರಿದ್ದರು. ಬೈಲುವಾರು ಸಂಚಾಲಕ ಪ್ರಕಾಶ್ ಕೆಮ್ಮಾರ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net