ಪರಮಾತ್ಮನ ಅನುಗ್ರಹದಿಂದ ಸಂಕಷ್ಟ ಪರಿಹಾರ

gan-18
Published on

ಗಂಗೊಳ್ಳಿ: ಭಗವಂತ ಭಕ್ತರಿಗೆ ಅನುಗ್ರಹ ಮಾಡಲು ಸದಾ ತಯಾರಾಗಿರುತ್ತಾನೆ. ಭಗವಂತನನ್ನು ಆಶ್ರಯಿಸಿದವರನ್ನು ಭಗವಂತ ಕೈಹಿಡಿದು ಕಾಪಾಡಿ ಮುನ್ನಡೆಸುತ್ತಾನೆ. ಪರಮಾತ್ಮನ ಅನುಗ್ರಹದಿಂದ ಸಂಕಷ್ಟ ಪರಿಹಾರವಾಗಿ ಒಳ್ಳೆಯದಾಗುತ್ತದೆ. ಧರ್ಮ ಪರಂಪರೆ ತೋರಿಸಿದ ವಿಷಯ, ಆಚರಣೆ ಸದಾ ಸ್ಮರಣೆಯಲ್ಲಿಟ್ಟುಕೊಂಡು ಅವುಗಳನ್ನು ಅನುಷ್ಠಿಸಬೇಕು ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಹೇಳಿದರು.

ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನ ಮಲ್ಯರಬೆಟ್ಟು ಗಂಗೊಳ್ಳಿ, ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಹಾಗೂ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಮಲ್ಯರಬೆಟ್ಟು ಗಂಗೊಳ್ಳಿ ಸುವರ್ಣ ಸಂಭ್ರಮ ಸಮಾರಂಭ ಪ್ರಯುಕ್ತ ಬುಧವಾರ ಬ್ರಹ್ಮಕುಂಭಾಭಿಷೇಕ ನೆರವೇರಿಸಿ, ಭೋಜನಾಲಯ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಕೊಗ್ಗ ಖಾರ್ವಿ, ಗೌರವಾಧ್ಯಕ್ಷ ಶಿವಪ್ಪ ಖಾರ್ವಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ವಿ.ಖಾರ್ವಿ, ಸೇವಾ ಸಮಿತಿ ಕಾರ್ಯದರ್ಶಿ ಜಿ.ಎನ್.ಸತೀಶ ಖಾರ್ವಿ, ಭಜನಾ ಮಂಡಳಿ ಅಧ್ಯಕ್ಷ ಎಂ.ಜನಾದರ್ನ ಖಾರ್ವಿ, ಕಾರ್ಯದರ್ಶಿ ಎಂ.ಸತೀಶ ಖಾರ್ವಿ, ಮಹಿಳಾ ಮಂಡಳಿ ಸದಸ್ಯರು, ಪುರೋಹಿತರು, ವೈದಿಕರು, ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಜಟ್ಟಿಗ ಸೇವಾ ಸಮಿತಿ ಅಧ್ಯಕ್ಷ ಜಿ.ರಾಮಪ್ಪ ಖಾರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ವಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net