ಜಿಯೋ ಹೊಸ ಆಫರ್.. 100 ಜಿಬಿ ಸ್ಟೋರೇಜ್ ಉಚಿತ!

jio-6
Published on

ಮುಂಬೈ: ಜಿಯೋ ಗ್ರಾಹಕರಿಗೆ ಹೊಸ ಆಫರ್ ಘೋಷಿಸಿದೆ. ಉಚಿತ 100 ಜಿಬಿ ಸ್ಟೋರೇಜ್​ ನೀಡಲು ಮುಂದಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ 47 ನೇ ವಾರ್ಷಿಕೋತ್ಸವ ಸಾಮಾನ್ಯ ಸಭೆಯಲ್ಲಿ ಕಂಪನಿ ಅಧ್ಯಕ್ಷ ಮುಖೇಶ್ ಅಂಬಾನಿ ಪ್ರಮುಖ ಘೋಷಣೆಗಳನ್ನು ಮಾಡಿದ್ದು, ಅದರಲ್ಲಿ ಜಿಯೋ ಬಳಕೆದಾರರಿಗೆ ಎಐ ಕ್ಲೌಡ್ ವೆಲ್ಕಮ್ ಆಫರ್ ಅಡಿ 100 ಜಿಬಿ ಉಚಿತ ಕ್ಲೌಡ್ ಸಂಗ್ರಹಣೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಈ ಹೊಸ ಆಫರ್ ದೀಪಾವಳಿಯಿಂದ ಲಭ್ಯವಾಗಲಿದೆ. ಈ ಕೊಡುಗೆಯನ್ನು ಘೋಷಿಸಲು ಸಂತೋಷವಾಗಿದೆ. ಜಿಯೋ ಬಳಕೆದಾರರು ತಮ್ಮ ಫೋಟೋಗಳು, ವೀಡಿಯೊಗಳು, ಮೌಲ್ಯಯುತ ದಾಖಲೆಗಳು, ಇತರ ಡಿಜಿಟಲ್ ವಿಷಯ ಮತ್ತು ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಸುಲಭವಾಗಿ ಪ್ರವೇಶಿಸಲು ನಾವು 100 ಜಿಬಿ ವರೆಗೆ ಉಚಿತ ಕ್ಲೌಡ್ ಸಂಗ್ರಹಣೆಯನ್ನು ಒದಗಿಸುತ್ತಿದ್ದೇವೆ ಎಂದರು.

ಹೆಚ್ಚಿನ ಡೇಟಾ ಸಂಗ್ರಹಣೆ ಅಗತ್ಯವಿರುವವರಿಗೆ ನಾವು ಕ್ಲೌಡ್ ಸಂಗ್ರಹಣೆಯನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net