ಶಿವಗಿರಿ ಬಿಲ್ಲವ ಸಂಘದ ವಿಜ್ಞಾಪನಾಪತ್ರ ಬಿಡುಗಡೆ

vijpana pathra
ಕೊಕ್ಕರ್ಣೆ ಬಿಲ್ಲವ ಸಂಘದ ರಜತ ಮಹೋತ್ಸವ ಸಮಾರಂಭದ ವಿಜ್ಞಾಪನಾ ಪತ್ರ ಇತ್ತೀಚೆಗೆ ಬಿಡುಗಡೆಗೊಂಡಿತು. ಬೇಬಿ, ಸಂಜೀವ ವೆಂಕಟೇಶ ಮೊದಲಾದವರಿದ್ದರು.
Published on

ಕೊಕ್ಕರ್ಣೆ: ಶಿವಗಿರಿಯ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವರ ಸೇವಾ ಸಂಘ ಸ್ಥಾಪನೆಯಾಗಿ 25 ಸಂವತ್ಸರಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ನಡೆಯಲಿದ್ದು, ಇದರ ವಿಜ್ಞಾಪನಾಪತ್ರ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ವಿಶುಕುಮಾರ್, ಉದ್ಯಮಿ ಬಾಬು ಶಿವಪೂಜಾರಿ, ದಿನಕರ ಹೇರೂರು ಹಾಗೂ ಉಡುಪಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿಯವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷೆ ಬೇಬಿ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಂಜೀವ, ವೆಂಕಟೇಶ ಸುವರ್ಣ, ಗಣಪ ಪೂಜಾರಿ, ಶಂಕರ ಪೂಜಾರಿ, ಮಾರಾಳಿ ರವಿ ಪೂಜಾರಿ, ಸುರೇಶ್ಚಂದ್ರ ಬಾಬು, ಪ್ರಜ್ವತ್ ಕೆ. ಎಸ್, ಲಕ್ಷ್ಮಣ ಪೂಜಾರಿ, ಜಯಂತ ಪೂಜಾರಿ, ಶೀಲಾ ಪೂಜಾರಿ, ಶಂಕರ ಪೂಜಾರಿ, ಮಹಾಬಲ ಪೂಜಾರಿ, ಶಂಕರ ಮಾಸ್ಟರ್, ಸತೀಶ್ ಪೂಜಾರಿ, ನರಸಿಂಹ ಪೂಜಾರಿ, ಗುಲಾಬಿ ಪೂಜಾರಿ, ರಾಮ ಅಮೀನ್, ಚಂದ್ರಶೇಖರ ಪೂಜಾರಿ, ಶಂಕರ ಪೂಜಾರಿ, ಸಂಜೀವ ಪೂಜಾರಿ, ಯಶೋದಾ ಎಂ. ಪೂಜಾರಿ, ಜ್ಯೋತಿ ಕಮಲೇಶ್ ಉಪಸ್ಥಿತರಿದ್ದರು. 2025ರ ಫೆಬ್ರವರಿಯಲ್ಲಿ ರಜತ ಮಹೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net