ಆಯುರ್ವೇದದ ಆರೋಗ್ಯದ ತ್ರಿಕೋನವು ಆಹಾರ, ಸಮತೋಲಿತ ಜೀವನ ಮತ್ತು ನಿದ್ರೆಯನ್ನು ಒಳಗೊಂಡಿದೆ. ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳು ನೀವು ಹೇಗೆ ಮಲಗುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮಲಗುವಾಗ ನಿಮ್ಮ ದಿಕ್ಕು ಸರಿಯಿಲ್ಲದಿದ್ದರೆ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಸರಿಯಾದ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ನಿಮಗೆ ಒಳ್ಳೆಯ ನಿದ್ರೆ ಬರುವುದಲ್ಲದೆ ಆರ್ಥಿಕವಾಗಿಯೂ ಸಮೃದ್ಧಿಯಾಗುತ್ತಿರಿ ಎಂದು ಹೇಳುತ್ತಾರೆ. ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬೇಡಿ ಎಂದು ಹಿರಿಯರು ಹೇಳಿರುವುದನ್ನು ಕೇಳಿರುತ್ತೀರಿ. ಹಾಗಾದ್ರೆ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಉತ್ತಮ ಎಂದು ಯೋಚಿಸುತ್ತಿದ್ದೀರಾ? ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು ಮತ್ತು ಅದರಿಂದಾಗುವ ಪ್ರಯೋಜನಗಳೇನು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನು ಓದಿ: ರಕ್ತನಾಳ ಆರೋಗ್ಯವಾಗಿದ್ದರೆ ಹೃದಯ ಸೇಫ್; ನಿಮ್ಮ ಆಹಾರದಲ್ಲಿ ಈ ಪದಾರ್ಥಗಳು ಇರಲಿ
ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದು ಅಶುಭ:
- ಭೂಮಿಯ ಅಯಸ್ಕಾಂತೀಯ ಕ್ಷೇತ್ರವು ಉತ್ತರ ದಿಕ್ಕಿನಲ್ಲಿ ಬಲವಾಗಿರುತ್ತದೆ. ಇದು ನಿದ್ರೆಯನ್ನು ಅಡ್ಡಿಪಡಿಸುತ್ತದೆ. ಕಾಂತೀಯ ಕ್ಷೇತ್ರಗಳು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.
- ಹಿಂದೂ ಧರ್ಮದಲ್ಲಿ, ಉತ್ತರ ದಿಕ್ಕನ್ನು ಸಾವಿನ ದೇವರು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ನಕಾರಾತ್ಮಕ ಶಕ್ತಿಯು ಈ ದಿಕ್ಕಿನಿಂದ ಆಕರ್ಷಿತವಾಗುತ್ತದೆ. ಇದು ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
- ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆ ಹೆಚ್ಚಾಗುತ್ತದೆ. ತಲೆನೋವು, ಅನಿಯಮಿತ ರಕ್ತದೊತ್ತಡ, ಜೀರ್ಣಕಾರಿ ಸಮಸ್ಯೆಗಳು ಮತ್ತು ಕೀಲು ನೋವು ಉಂಟಾಗಬಹುದು ಎಂದು ನಂಬಲಾಗಿದೆ.
ಪೂರ್ವ ದಿಕ್ಕು :
- ಸೂರ್ಯೋದಯದ ದಿಕ್ಕಾಗಿರುವುದರಿಂದ, ಪೂರ್ವ ದಿಕ್ಕನ್ನು ಧನಾತ್ಮಕ ಶಕ್ತಿ, ಹೊಸ ಅವಕಾಶಗಳು ಮತ್ತು ಉತ್ತಮ ಆರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.
- ಸೂರ್ಯನು ಸಹ ಈ ದಿಕ್ಕಿನಿಂದ ಹುಟ್ಟುವುದರಿಂದ ಅದನ್ನು ಜೀವ ನೀಡುವ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ತಪ್ಪಾಗಿಯೂ ಈ ದಿಕ್ಕಿಗೆ ನಿಮ್ಮ ಪಾದಗಳನ್ನು ಇಟ್ಟು ಮಲಗಬೇಡಿ. ಧಾರ್ಮಿಕ ದೃಷ್ಟಿಕೋನದಿಂದ ಇದು ಅಶುಭವೆಂದು ಪರಿಗಣಿಸಲಾಗಿದೆ
- ವಿದ್ಯಾರ್ಥಿಯಾಗಿದ್ದರೆ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದು ಒಳ್ಳೆಯದು. ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ನಂಬಲಾಗಿದೆ.
ದಕ್ಷಿಣ ದಿಕ್ಕು:
- ದಕ್ಷಿಣ ದಿಕ್ಕನ್ನು ಸಂಪತ್ತು ಮತ್ತು ಸಮೃದ್ಧಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
- ಈ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಂದ ದೂರವಿರುತ್ತೀರಿ ಎಂದು ನಂಬಲಾಗಿದೆ. ನಿಮ್ಮ ಪಾದಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಬಾರದು ಎಂಬುದನ್ನು ನೆನಪಿನಲ್ಲಿಡಿ. ಧಾರ್ಮಿಕ ದೃಷ್ಟಿಕೋನದಿಂದ ಇದು ಅಶುಭವೆಂದು ಪರಿಗಣಿಸಲಾಗಿದೆ.
- ಪಾದಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗುವುದು ವೈಜ್ಞಾನಿಕವಾಗಿಯು ಹಾನಿಕಾರಕವಾಗಿದೆ. ದಕ್ಷಿಣದಲ್ಲಿ ಪಾದಗಳನ್ನು ಸ್ಪರ್ಶಿಸುವ ಮೂಲಕ ಕಾಂತೀಯ ಪ್ರವಾಹವು ಪಾದಗಳನ್ನು ಪ್ರವೇಶಿಸುತ್ತದೆ ಮತ್ತು ತಲೆಯ ಮೂಲಕ ಹೊರಬರುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ಮನಸ್ಸಿನಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿದ್ರೆಯನ್ನು ಸಹ ಹಾಳು ಮಾಡುತ್ತದೆ.
ಅನ್ನ ತಿನ್ನುವುದು ಆರೋಗ್ಯಕರವೇ.. ಇಲ್ಲವೇ?; ಗೊಂದಲ ಹೋಗಲಾಡಿಸುವ ಮಾಹಿತಿ ಇಲ್ಲಿದೆ