ಜೂ.10ರಿಂದ ಡಿಸಿಇಟಿ ರಾಂಕ್ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ

Published on

ಬೆಂಗಳೂರು : ಮೂರನೇ ಸೆಮಿಸ್ಟರ್ ಅಥವಾ ಎರಡನೇ ವರ್ಷದ ಎಂಜಿನಿಯರಿಂಗ್ ಕೋರ್ಸುಗಳ ನೇರ ಪ್ರವೇಶಾತಿಗೆ ಹಾಗು ಮೊದಲನೇ ವರ್ಷದ ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ಜೂ.10ರಿಂದ 13ರವರೆಗೆ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಸಿಇಟಿ ರಾಂಕ್ ಪಡೆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ದಾಖಲಾತಿ ಪರಿಶೀಲನೆ ನಡೆಯುವ 37 ಕಾಲೇಜುಗಳ ಪಟ್ಟಿಯನ್ನು ಕೆಇಎ ವೆಬ್ಸೈಟ್‌ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮಗೆ ಹತ್ತಿರ ಇರುವ ಯಾವುದಾದರೊಂದು ಕಾಲೇಜಿಗೆ ಖುದ್ದು ಹೋಗಬೇಕು. ಇದಕ್ಕೂ ಮೊದಲು ಅಭ್ಯರ್ಥಿಗಳು ಮುಂಗಡವಾಗಿ ದಿನಾಂಕ ನಿಗದಿ ಮಾಡಿಕೊಂಡು ಹೋಗುವಂತೆ ತಿಳಿಸಿದ್ದಾರೆ.

ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ವಿಶೇಷ ಪ್ರವರ್ಗದ (ಎನ್‌ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್ ಕ್ಲೇಮ್ ಮಾಡಿದ್ದಲ್ಲಿ ಮಾತ್ರ ಅರ್ಹತೆ) ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net