ಬೆಂಗಳೂರು: ಸಾರ್ವಜನಿಕವಾಗಿ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಮಿಂಚುವ ಅರುಣ್ ಕಟಾರೆಯನ್ನು ಪೊಲೀಸರು ಬಂದಿಸಿದ್ದಾರೆ.
ಅರುಣ್ ಕಟಾರೆ (24) ಜೈಲು ಸೇರಿದ ರೀಲ್ಸ್ ಸ್ಟಾರ್. ಪಾಶ್ ಕಾರುಗಳು, ಮೈತುಂಬಾ ಚಿನ್ನ..ಕೈ ತುಂಬಾ ಹಣ..ದುಬಾರಿ ಜೀವನ..ಗನ್ ಮ್ಯಾನ್..ಬಾಡಿ ಗಾರ್ಡ್ಸ್.. ಜೊತೆಗೆ ಸುತ್ತ ಮುತ್ತ ಹುಡುಗಿಯರು. ನೋಡುಗರ ಕಣ್ಣು ಕುಕ್ಕುವಂತೆ ದುಬಾರಿ ಜೀವನ ನಡೆಸುವ ಈತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
ಇತ್ತೀಚೆಗೆ ಚೊಕ್ಕನಹಳ್ಳಿ ಸಮೀಪದ ರಸ್ತೆಯಲ್ಲಿ ಐಷಾರಾಮಿ ಕಾರಿನಿಂದ ಬಾಡಿ ಗಾರ್ಡ್ಸ್ ಸಮೇತ ಅರುಣ್ ‘ಡಾನ್’ ರೀತಿ ಕೆಳಗೆ ಇಳಿದಿದ್ದ. ಬಾಡಿ ಗಾರ್ಡ್ಸ್ ಎಕೆ-47 ಗನ್‌ಗಳನ್ನು ಕೈಯಲ್ಲಿ ಹಿಡಿದು ಹಿಂಬಾಲಿಸಿದ್ದರು. ವಿಡಿಯೋ ಸೆರೆ ಹಿಡಿಸಿದ್ದ ಅರುಣ್ ಕಟಾರೆ ತನ್ನ ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ನಲ್ಲಿ ರೀಲ್ಸ್ ಅಪ್‌ಲೋಡ್ ಮಾಡಿ ಲೈಕ್ಸ್ ಗಿಟ್ಟಿಸಿಕೊಂಡಿದ್ದ.
ಅರುಣ್ ಕಟಾರೆ ಶೋಅಪ್ಗೆ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಕೊತ್ತನೂರು ಪೊಲೀಸರು ಸಾರ್ವಜನಿಕವಾಗಿ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದಕ್ಕೆ ಕೇಸ್ ದಾಖಲು ಮಾಡಿಕೊಂಡಿರುವ ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್, ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅರುಣ್ ಕಟಾರೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ವಿಚಾರಣೆ ವೇಳೆ ಈತ ಹಿಡಿದುಕೊಂಡು ಓಡಾಡಿರುವುದು ನಕಲಿ ಗನ್, ಗೋಲ್ಡ್ ಎನ್ನುವುದು ತಿಳಿದು ಬಂದಿದೆ. ರೀಲ್ಸ್‌ಗಾಗಿ ಮಾಡಿದ ಶೋಕಿ ಈಗ ಜೈಲುಪಾಲಾಗುವಂತೆ ಮಾಡಿದೆ.