More

    ರಾಜ್ಯದಲ್ಲಿ ತಗ್ಗಿದ ಕರೊನಾ: 11 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ಕರೊನಾ ಸೋಂಕಿನ ಪ್ರಕರಣಗಳು ತಗ್ಗುತ್ತಾ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದು ನೈಟ್​ ಕರ್ಫ್ಯೂವನ್ನು ತೆರವುಗೊಳಿಸಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿದೆ ಎಂಬುದಕ್ಕೆ ಪೂರಕವಾದ ಅಂಕಿಅಂಶಗಳು ಪ್ರಕಟಗೊಂಡಿವೆ.

    ಇಂದಿನ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​ ಬುಲೆಟಿನ್​ ಪ್ರಕಾರ, ಗುರುವಾರ(ನ.4) ರಾಜ್ಯಾದ್ಯಂತ ವರದಿಯಾಗಿರುವ ಹೊಸ ಪ್ರಕರಣಗಳ ಸಂಖ್ಯೆ 214 ಆಗಿದೆ. ಈ ಸಂಖ್ಯೆಗಿಂತ ಹೆಚ್ಚಾಗಿ ಅಂದರೆ 286 ಜನ ಸೋಂಕಿತರು ಕರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕರೊನಾಗೆ ಏಳು ಜನ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಹಾಲಿ 8,188 ಕರೊನಾ ಸಕ್ರಿಯ ಪ್ರಕರಣಗಳಿವೆ.

    ಇದನ್ನೂ ಓದಿ: ಭಾರತಕ್ಕೆ ದೀಪಾವಳಿ ಉಡುಗೊರೆ! ಕೋವಾಕ್ಸಿನ್​ಗೆ ವಿಶ್ವ ಮಾನ್ಯತೆ

    ಹನ್ನೊಂದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲೇ ಅತಿಹೆಚ್ಚಾಗಿ ಅಂದರೆ 118 ಹೊಸ ಸೋಂಕು ಪ್ರಕರಣಗಳು ನ.4 ರಂದು ವರದಿಯಾಗಿವೆ. ಮೈಸೂರು ಜಿಲ್ಲೆಯಲ್ಲಿ 25, ಉತ್ತರ ಕನ್ನಡದಲ್ಲಿ 11, ದಕ್ಷಿಣ ಕನ್ನಡದಲ್ಲಿ 10 ಮತ್ತು ಉಡುಪಿಯಲ್ಲಿ 7 ಹೊಸ ಪ್ರಕರಣಗಳು ದಾಖಲಾಗಿವೆ.

    ಭಾರತ-ಪಾಕ್​ ಪಂದ್ಯದ ಫೀಸನ್ನು ಬಾಬರ್​ ಅಜಂ​ ಯಾವುದಕ್ಕೆ ಬಳಸಲಿದ್ದಾರೆ ಗೊತ್ತೆ?

    ವೈಟ್​ಹೌಸ್​ನಲ್ಲೂ ಬೆಳಗಿದ ದೀಪ! ಹಬ್ಬಕ್ಕೆ ಶುಭ ಕೋರಿದ ಅಮೆರಿಕ ಅಧ್ಯಕ್ಷ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts