

ಸಂದೀಪ್ ಸಾಲ್ಯಾನ್ ಬಂಟ್ವಾಳ
ಕೆಂಪು ಕಲ್ಲು ಹಾಗೂ ಮರಳು ಪೂ ರೈಕೆ ಸ್ಥಗಿತಗೊಂಡಿರುವುದು ಕಟ್ಟಡ ಕಾರ್ಮಿಕ ದೈನಂದಿನ ಜೀವನದ ಮೇಲೆ ಭಾರಿ ಹೊಡೆತ ನೀಡಿದ್ದು, ಕಟ್ಟಡ ನಿರ್ಮಾಣ ಕೆಲಸಗಳು ಸ್ಥಗಿತಗೊಂಡಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಿಲ್ಲಾಡಳಿತ ಕೆಂಪು ಕಲ್ಲು ಹಾಗೂ ಪೂರೈಕೆ ಸ್ಥಗಿತ ಮರಳು ಪೂರೈಕೆ ನಿಷೇಧಿಸಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದು, ಇದನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ಜಿಲ್ಲೆಯೊಳಗಿನ, ಹೊಜಿಲ್ಲೆ ಹಾಗೂ ರಾಜ್ಯದ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದು, ಕುಟುಂಬ ನಿರ್ವಹಿಸಲಾಗದೆ ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ.
ಜಿಲ್ಲಾಡಳಿತದ ಈ ನಿರ್ಧಾರ ಕಟ್ಟಡ ಕಾರ್ಮಿಕರ ಹೊರತಾಗಿ ಕ್ಯಾಂಟೀನ್, ಸಣ್ಣ ಹೋಟೆಲ್ ಹಾಗೂ ಹಾರ್ಡ್ವೇರ್ ವ್ಯಾಪಾರಿಗಳ ಮೇಲೂ ಹೊಡೆತ ಬಿದ್ದಿದೆ. ಸಣ್ಣ ವ್ಯಾಪಾರಿಗಳ ವ್ಯಾಪಾರದಲ್ಲಿ ಭಾರಿ ಇಳಿಕೆಯಾಗಿದ್ದು, ಕಾರ್ಮಿಕರು ಅಂಗಡಿಗಳಿಗೆ ಬಾರದೆ ಇರುವುದರಿಂದ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಹಾರ್ಡ್ವೇರ್ ಅಂಗಡಿಗಳಲ್ಲಿ ಕಬ್ಬಿಣ, ಸಿಮೆಂಟ್ ವ್ಯಾಪಾರವಾಗದೆ ಇದ್ದು, ಜತೆಗೆ ದಿನಸಿ ಅಂಗಡಿಗಳಲ್ಲೂ ವ್ಯಾಪಾರ ಭಾರಿ ವ್ಯತ್ಯಾಸವಾಗಿದೆ.
ಕರೋನಾ ಅವಧಿಗಿಂತಲೂ ಕಠಿಣ
ಕೆಂಪು ಕಲ್ಲು ಹಾಗೂ ಮರಳು ಪೂರೈಕೆ ನಿರ್ಧಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರು ಈ ಕುರಿತು ದೊಡ್ಡಮಟ್ಟದಲ್ಲಿ ಅಸಮಾಧಾನ ಹೊರಹಾಕಿದ್ದು, ಕರೋನಾ ಅವಧಿಯಲ್ಲಿ ಎದುರಾಗಿದ್ದ ಸಂಕಷ್ಟಕ್ಕಿಂತಲೂ ಇದು ಭೀಕರವಾಗಿದೆ. ಜಿಲ್ಲಾಡಳಿತ ಅಥವಾ ಸರ್ಕಾರ ಈ ನಿರ್ಧಾರವನ್ನು ಮಾರ್ಪಡುಗೊಳಿಸಬೇಕಿದ್ದು, ಇಲ್ಲದಿದ್ದರೆ ಕಟ್ಟಡ ಕಾರ್ಮಿಕರ ಸಂಘ ಸಹಿತ ವಿವಿಧ ಸಂಘ, ಸಂಸ್ಥೆ ಹಾಗೂ ಸಂಘಟನೆಗಳ ಜತೆಗೂಡಿ ಜಿಲ್ಲೆಯಾದ್ಯಂತ ದೊಡ್ಡಮಟ್ಟದಲ್ಲಿ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ಯಾರ್ಯಾರ ಮೇಲೆ ದುಷ್ಪರಿಣಾಮ?
ಕಟ್ಟಡ ನಿರ್ಮಾಣ ಕಾರ್ಮಿಕರ ಜತೆಗೆ ಸಿವಿಲ್ ಗುತ್ತಿಗೆದಾರರು, ಮೇಸ್ತ್ರಿಗಳು, ಗಾರೆ ಕೆಲಸದವರು, ಟೈಲ್ಸ್ ಗ್ರಾನೈಟ್ ಅಳವಡಿಸುವವರು, ಪ್ಲಂಬರ್ಗಳು, ಪೈಂಟರ್ಗಳು, ಇಲೆಕ್ಟ್ರೀಷಿಯನ್ಗಳು, ಲಾರಿ ಮಾಲೀಕ ಹಾಗೂ ಕಾರ್ಮಿಕರು, ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುವವರ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಿದೆ.
ಕೆಂಪುಕಲ್ಲು, ಮರಳು ಸ್ಥಗಿತವಾದ ಬಳಿಕ ಒಂದು ತಿಂಗಳಿನಿಂದ ವ್ಯಾಪಾರ ಕ್ಷೀಣಿಸಿದೆ. ಸದಾ ತುಂಬಿರುತ್ತಿದ ಅಂಗಡಿಯಲ್ಲಿ ಈಗ ಗ್ರಾಹಕರು ಕಡಿಮೆಯಾಗಿದ್ದಾರೆ. ಹೀರೇಲಾಲ್, ಹಾರ್ಡ್ವೇರ್ ಅಂಗಡಿ ಮಾಲೀಕ ಈ ಭಾಗಕ್ಕೆ ಕೆಲಸಕ್ಕೆ ಬರುವ ಮೇಸ್ತ್ರಿಗಳು, ಕೂಲಿ ಕಾರ್ಮಿಕರು ನಮ್ಮ ಕ್ಯಾಂಟೀನ್ನ ಊಟ ಉಪಹಾರ, ಸಂಜೆ ಫಾಸ್ಟ್ಪುಡ್ ತಿನ್ನಲು ಬರುತ್ತಿದ್ದರು. ಕೆಂಪುಕಲ್ಲು ಬಂದ್ ಆದ ಬಳಿಕ ಕಾರ್ಮಿಕರಿಗೂ ಕೆಲಸವಿಲ್ಲದೆ ನಮ್ಮ ಕ್ಯಾಂಟೀನ್ ವ್ಯಾಪಾರವು ಕಡಿಮೆಯಾಗಿ ಜೀವನ ಕಷ್ಟವಾಗಿದೆ. ಶ್ರೀನಿವಾಸ್, ಕ್ಯಾಂಟೀನ್ ಮಾಲೀಕ ಸಜೀಪ ಕಟ್ಟಡ ನಿರ್ಮಾಣ ಕೆಲಸವಿಲ್ಲದೆ ಸೆಂಟ್ರಿಂಗ್ ಸಾಮಗ್ರಿಗಳನ್ನು ಎತ್ತಿಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಕೆಲಸವನ್ನು ನಂಬಿ, ಸಾಲ ಮಾಡಿ ಖರೀದಿಸಿದಂತಹ ರನ್ನರ್, ಕಬ್ಬಿಣದ ಕಂಬ, ಹಲಗೆಗಳನ್ನು ಇಟ್ಟುಕೊಂಡು ಏನು ಮಾಡುವುದು? ಬ್ಯಾಂಕ್ ಸಾಲಕ್ಕೆ ಬಡ್ಡಿ ಕಟ್ಟದಿದ್ದರೆ ಬ್ಯಾಂಕಿನವರು ಸುಮ್ಮನಿರುತ್ತಾರೆಯೇ? ಮನೋಜ್, ಸೆಂಟ್ರಿಂಗ್ ಗುತ್ತಿಗೆದಾರ ಕೆಂಪುಕಲ್ಲು, ಮರಳುಗಾರಿಕೆಯನ್ನೇ ಅವಲಂಬಿಸಿರುವ ಸಿವಿಲ್ ಗುತ್ತಿಗೆದಾರರು, ಕಾರ್ಮಿಕರು ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ. ಒಂದೆಡೆ ಮಳೆಗಾಲ, ಇನ್ನೊಂದೆಡೆ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಕಾರ್ಮಿಕರ ಪರವಾಗಿ ಹೋರಾಟ ಮಾಡುವ ಯಾವುದೇ ಸಂಘಟನೆಗೂ ನಮ್ಮ ಬೆಂಬಲವಿದೆ. ಶೈಲೇಶ್ ಪೂಜಾರಿ, ಅಧ್ಯಕ್ಷ, ಬಂಟ್ವಾಳ ತಾಲೂಕು ಪಿಡಬ್ಲುೃಡಿ ಗುತ್ತಿಗೆದಾರರ ಸಂಘ