ಕರಾವಳಿಯಲ್ಲಿ ರೆಡ್ ಅಲೆರ್ಟ್ ಘೋಷಣೆ ; ಭಾರೀ ಮಳೆಯ ಮುನ್ಸೂಚನೆ

Mng-july24-adhyapady1 (2)
Published on

ಮಂಗಳೂರು: ರಾಜ್ಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ಜುಲೈ 25 ರಂದು ರೆಡ್ ಅಲೆರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಧಾರಾಕಾರ ಮಳೆ ಜೊತೆ ಬಿರುಸಿನ ಗಾಳಿ ಬೀಸುತ್ತಿದ್ದು, ನದಿ, ಕೆರೆ, ಹಳ್ಳ, ತೋಡುಗಳು ತುಂಬಿ ನೀರು ಹರಿಯುತ್ತಿದೆ. ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net