ರಜೆ ಸಂದರ್ಭದಲ್ಲಿಯೂ ಅತಿಥಿ ಶಿಕ್ಷಕರಿಗೆ ವೇತನ ನೀಡುವ ವ್ಯವಸ್ಥೆಯಾಗಲಿ

GUEST TEACHERS
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕುಷ್ಟಗಿ ತಾಲೂಕಿನ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ವಿಜಯಾಗೆ ಬುಧವಾರ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಶ್ರೀಕಾಂತ ಕಿರಗಿ, ಉಪಾಧ್ಯಕ್ಷೆ ಕೆ.ಶಾಂತಾ, ಜಿಲ್ಲಾ ಕಾರ್ಯದರ್ಶಿ ಶಶಿಧರ ಹಕ್ಕಿ, ಪದಾಧಿಕಾರಿಗಳಾದ ಮುತ್ತಪ್ಪ ವಾಲಿಕಾರ, ಮಾನಪ್ಪ ನಿಡಶೇಸಿ, ಹನುಮಂತಪ್ಪ ಬಿಂಗಿ, ಶಿವಪ್ಪ ಗರ್ಜಿನಾಳ, ಸವಿತಾ ಪಲ್ಲೇದ್, ಮುದಿಯಪ್ಪ ಮುಳ್ಳೂರು, ಮಂಜುಳಾ, ಸವಿತಾ ಇತರರು ಇದ್ದರು.
Published on

ಕುಷ್ಟಗಿ: ಶಿಕ್ಷಕ ಹುದ್ದೆ ನೇಮಕಾತಿ ವೇಳೆ ಅತಿಥಿ ಶಿಕ್ಷಕರ ಸೇವಾ ಹಿರಿತನ ಪರಿಗಣಿಸಿ ಮೊದಲ ಆದ್ಯತೆ ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿರಸ್ತೇದಾರ್ ವಿಜಯಾಗೆ ಬುಧವಾರ ಮನವಿ ಸಲ್ಲಿಸಿದರು.

ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು. ಕಾಯಂ ಶಿಕ್ಷಕರಿಗೆ ನೀಡುವಂತೆ ರಜೆ ಸೌಲಭ್ಯದ ಜತೆಗೆ ರಜೆ ವೇಳೆ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಆದೇಶ ಜಾರಿ ಮಾಡಿ ಕಾಲಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು. ಅತಿಥಿ ಎನ್ನುವ ಬದಲು ಗೌರವ ಶಿಕ್ಷಕ ಎಂದು ಸಂಬೋಧಿಸಬೇಕು ಎಂದು ಆಗ್ರಹಿಸಿದರು.

ಸಂಘದ ತಾಲೂಕು ಅಧ್ಯಕ್ಷ ಶ್ರೀಕಾಂತ ಕಿರಗಿ, ಉಪಾಧ್ಯಕ್ಷೆ ಕೆ.ಶಾಂತಾ, ಜಿಲ್ಲಾ ಕಾರ್ಯದರ್ಶಿ ಶಶಿಧರ ಹಕ್ಕಿ, ಪದಾಧಿಕಾರಿಗಳಾದ ಮುತ್ತಪ್ಪ ವಾಲಿಕಾರ, ಮಾನಪ್ಪ ನಿಡಶೇಸಿ, ಹನುಮಂತಪ್ಪ ಬಿಂಗಿ, ಶಿವಪ್ಪ ಗರ್ಜಿನಾಳ, ಸವಿತಾ ಪಲ್ಲೇದ್, ಮುದಿಯಪ್ಪ ಮುಳ್ಳೂರು, ಮಂಜುಳಾ, ಸವಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net