ಫ್ರಂಟ್ ಲೈನ್ ಆಫೀಸರ್ಸ್ ಫೀಲ್ಡ್ ವರ್ಕ್ ಹುದ್ದೆ ಖಾಲಿ: ಏ.17ರಂದು ನಗರದಲ್ಲಿ ನೇರ ಸಂದರ್ಶನ

Recruitment for the post of Front Line Officer Field Worker Mandya
Published on

ಮಂಡ್ಯ: ಎಲ್ ಆ್ಯಂಡ್ ಟಿ ಸಂಸ್ಥೆಯಲ್ಲಿ ಖಾಲಿ ಇರುವ ಎಫ್‌ಎಲ್‌ಒ (ಫ್ರಂಟ್ ಲೈನ್ ಆಫೀಸರ್ಸ್ ಫೀಲ್ಡ್ ವರ್ಕ್)ನ 30 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಏ.17ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಆಯ್ಕೆಯಾದವರಿಗೆ ಮಾಸಿಕ 18,500 ರೂ ವೇತನದ ಜತೆಗೆ ಟಿ.ಎ, ವೈದ್ಯಕೀಯ ವಿಮೆ ಸೌಲಭ್ಯ ಸಿಗಲಿದೆ. ಯಾವುದೇ ಪದವಿ ಹೊಂದಿರುವ 21 ರಿಂದ 32 ವರ್ಷದೊಳಗಿನವರು ಅಂದು ಬೆಳಗ್ಗೆ 10ಗಂಟೆಗೆ ಗಾಂಧಿನಗರ, 2ನೇ ಕ್ರಾಸ್‌ನಲ್ಲಿರುವ ಎಲ್ ಆ್ಯಂಡ್ ಟಿ ಸಂಸ್ಥೆಯಲ್ಲಿ ಆಯೋಜಿಸಿರುವ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂ.ಸಂ 08232-295124 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net