18 ವರ್ಷದ ಬಳಿಕ ರಾಜಧಾನಿಯಲ್ಲಿ ದಾಖಲೆ ಮಳೆ

bangalore rain
Published on

ಬೆಂಗಳೂರು: ಈ ಬಾರಿ ಸುರಿದ ಹಿಂಗಾರು ಮಳೆಗೆ ಹಳೆಯ ದಾಖಲೆಗಳು ಧೂಳಿಪಟವಾಗಿವೆ. 18 ವರ್ಷದ ಬಳಿಕ ನಗರದಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಕೆಂಗೇರಿ, ಯಲಹಂಕ, ಉತ್ತರಹಳ್ಳಿ, ತಾವರಕೆರೆ, ಯಶವಂತಪುರ, ದಾಸನಪುರ, ಹೆಸರಟ್ಟ, ಬಿದರಹಳ್ಳಿ, ಸರ್ಜಾಪುರದಲ್ಲಿ ಜಾಸ್ತಿ ಮಳೆಯಾಗಿದೆ.

ಅ.1ರಿಂದ ಅ.24ರವರೆಗೆ ನಗರದಲ್ಲಿ ವಾಡಿಕೆಯಂತೆ 128 ಮಿಮೀ ಮಳೆಯಾಗಬೇಕಿತ್ತು. ಆದರೆ 275 ಮಿಮೀ ಮಳೆ ಸುರಿದಿದ್ದು, ಶೇ.115 ವಾಡಿಕೆಗಿಂತ ಅಧಿಕ ಬಿದ್ದಿದೆ. 2005ರ ಅ.1ರಿಂದ ಅ.24ರವರೆಗೆ 291 ಮಿಮೀ ಮಳೆಯಾದರೆ, 1970ರ ಅ.1ರಿಂದ ಅ.24ರವರೆಗೆ 253 ಮಿಮೀ ಹಾಗೂ 1943ರ ಅ.1ರಿಂದ ಅ.24ರವರೆಗೆ 287 ಮಿಮೀ ಮಳೆ ಸುರಿದಿತ್ತು. ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟೇ ಸುರಿದಿದೆ.

ಪ್ರಸಕ್ತ ವರ್ಷದ ಜೂ.1ರಿಂದ ಸೆ.30ರವರೆಗೆ ವಾಡಿಕೆಯಂತೆ 471 ಮಿಮೀ ಮಳೆಯಾಗುವ ಬದಲು 418 ಮಿಮೀ ಸುರಿದಿದ್ದು, ಶೇ.11 ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ. ಅಲ್ಲದೆ, ಜ.1ರಿಂದ ಅ.24ರವರೆಗೆ 755 ಮಿಮೀ ಮಳೆಯಾಗಬೇಕಿತ್ತು. ಆದರೆ, 845 ಮಿಮೀ ಸುರಿದಿದ್ದು, ಶೇ.12 ವಾಡಿಕೆಗಿಂತ ಜಾಸ್ತಿ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net