More

    ಜಿಎಸ್​ಟಿ ಸಂಗ್ರಹದಲ್ಲಿ ದಾಖಲೆ: ಇದೇ ಮೊದಲ ಬಾರಿಗೆ ರೂ. 2 ಲಕ್ಷ ಕೋಟಿಗೂ ಅಧಿಕ ಕಲೆಕ್ಷನ್​

    ನವದೆಹಲಿ: ದೇಶದ ಒಟ್ಟು ಜಿಎಸ್‌ಟಿ ಸಂಗ್ರಹವು ಏಪ್ರಿಲ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಮಾಸಿಕ ಸಂಗ್ರಹ ಇದೇ ಮೊದಲ ಬಾರಿ 2 ಲಕ್ಷ ಕೋಟಿ ರೂಪಾಯಿ ದಾಟಿದ್ದು, 2.10 ಲಕ್ಷ ಕೋಟಿ ರೂಪಾಯಿ ತಲುಪಿದೆ.

    ದೇಶೀಯ ವಹಿವಾಟುಗಳು ಮತ್ತು ಆಮದುಗಳಲ್ಲಿನ ಬಲವಾದ ಹೆಚ್ಚಳದಿಂದ ವರ್ಷಕ್ಕೆ ಶೇಕಡಾ 12.4ರಷ್ಟು ಬೆಳವಣಿಗೆಯಾಗಿದೆ.

    ಜಿಎಸ್‌ಟಿ ಸಂಗ್ರಹವು 2 ಲಕ್ಷ ಕೋಟಿ ರೂ.ಗಳ ಮೈಲಿಗಲ್ಲು ದಾಟಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

    “ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಏಪ್ರಿಲ್ 2024 ರಲ್ಲಿ 2.10 ಲಕ್ಷ ಕೋಟಿ ರೂ.ಗಳಲ್ಲಿ ದಾಖಲೆಯ ಎತ್ತರವನ್ನು ತಲುಪಿದೆ. ಇದು ದೇಶೀಯ ವಹಿವಾಟುಗಳಲ್ಲಿನ ಬಲವಾದ ಹೆಚ್ಚಳದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ ಶೇಕಡಾ 12.4 ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ” ಎಂದು ಸಚಿವಾಲಯ ತಿಳಿಸಿದೆ.

    ಕಳೆದ ತಿಂಗಳು ಜಿಎಸ್​ಟಿ ಸಂಗ್ರಹಣೆ 1.78 ಲಕ್ಷ ಕೋಟಿ ರೂ.ಗಿಂತ ಅಧಿಕವಿದ್ದರೆ, 2023ರ ಏಪ್ರಿಲ್‌ನಲ್ಲಿ ಇದು 1.87 ಲಕ್ಷ ಕೋಟಿ ರೂ. ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts