More

    ಚಾಮುಂಡಿ ಬೆಟ್ಟದ ಹುಂಡಿಯಲ್ಲಿ ಸಂಗ್ರಹವಾಗಿದೆ ದಾಖಲೆ ಧನರಾಶಿ

    ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಹುಂಡಿಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 1.77 ಕೋಟಿ ರೂ. ಸಂಗ್ರಹವಾಗಿದೆ. ಗುರುವಾರದಂದು ಹುಂಡಿ ಎಣಿಕೆ ಮಾಡಿದ್ದು, ಸೆಪ್ಟೆಂಬರ್ 23 ರಿಂದ ನವೆಂಬರ್ 10 ರವರೆಗೆ, ದಸರಾ ಸಂದರ್ಭವೂ ಸೇರಿದಂತೆ, ಈ ಮೊತ್ತ ಸಂಗ್ರಹವಾಗಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹುಂಡಿಯಲ್ಲಿ 2000 ರೂಪಾಯಿ ಮುಖಬೆಲೆಯ 223 ನೋಟುಗಳು, 500 ರೂ. ಬೆಲೆಯ 14,372 ನೋಟುಗಳು, 200 ರೂ. ಬೆಲೆಯ 4,728 ನೋಟುಗಳು, 100 ರೂ. ಮುಖಬೆಲೆಯ 57,003 ನೋಟುಗಳು, 50 ರೂ. ಮುಖಬೆಲೆಯ 30,280 ನೋಟುಗಳು, 20 ರೂ. ಮುಖಬೆಲೆಯ 26,012 ನೋಟುಗಳು, 10 ರೂ. ಮುಖಬೆಲೆಯ 96,505 ನೋಟುಗಳಿಂದ 1,74,85,623 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಹಾಗೂ 10, 5, 2 ಮತ್ತು 1 ರೂಪಾಯಿ ನಾಣ್ಯಗಳಿಂದ 3,09,862 ಲಕ್ಷ ರೂ. ಸೇರಿ, ಒಟ್ಟಾರೆಯಾಗಿ 1,77,95,485 ಕೋಟಿ ರೂ. ಸಂಗ್ರಹವಾಗಿದ ಎನ್ನಲಾಗಿದೆ.

    ತಾಲಿಬಾನ್​​ ಯಶಸ್ಸಿನಲ್ಲಿ ಪಾಕ್​ ಪಾತ್ರ ಪ್ರಮುಖ ಎನ್ನುತ್ತದೆ ಅಮೆರಿಕದ ವರದಿ

    ಹೃದಯದ ಆರೋಗ್ಯಕ್ಕಾಗಿ ಕುಳಿತಲ್ಲೇ ಮಾಡಬಹುದಾದ ಯೋಗ ಮುದ್ರೆಗಳು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts