More

    ತಾಲಿಬಾನ್​​ ಯಶಸ್ಸಿನಲ್ಲಿ ಪಾಕ್​ ಪಾತ್ರ ಪ್ರಮುಖ ಎನ್ನುತ್ತದೆ ಅಮೆರಿಕದ ವರದಿ

    ವಾಷಿಂಗ್ಟನ್​​: ಪಾಕಿಸ್ತಾನದ ತಾಲಿಬಾನ್​ ಪರ ನಿಲುವು ಅದರ ಹೇಳಿಕೆಗಳ ಮೂಲಕ ಜಗಜ್ಜಾಹೀರಾಗಿದೆ. ಹೀಗಿರುವಾಗ, ಅಮೆರಿಕದ ಕಾಂಗ್ರೆಸ್ ಮುಂದಿರಿಸಲಾಗಿರುವ ಸಂಶೋಧನಾ ವರದಿಯೊಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಹಿಡಿತ ಸಾಧಿಸುವಲ್ಲಿ ಪಾಕಿಸ್ತಾನ ಸಕ್ರಿಯ ಪಾತ್ರ ವಹಿಸಿದೆ ಎಂದು ಹೇಳಿದೆ.

    ಅಮೆರಿಕದ ಶಾಸಕರಿಗೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಲು ತಯಾರಿಸಲಾಗುವ ‘ಕಾಂಗ್ರೆಷನಲ್ ರಿಸರ್ಚ್​ ಸರ್ವೀಸ್​'(CRS)ನ ವರದಿ, ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ವಿಚ್ಛಿದ್ರಕಾರಕ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸುವ ಪಾತ್ರವನ್ನು ವಹಿಸಿದೆ ಎಂದು ಆರೋಪಿಸಿದೆ. ಪಾಕ್​​ ತಾಲಿಬಾನ್‌ಗೆ ಆ್ಯಕ್ಟೀವ್ ಮತ್ತು ಪ್ಯಾಸೀವ್​ ಬೆಂಬಲವನ್ನು ನೀಡಿದೆ ಎಂದಿದೆ.

    ಇದನ್ನೂ ಓದಿ: ಅಫ್ಘನ್​ ಮಹಿಳೆಯರು ಹಿಜಾಬ್​ ತೊಡುವುದಿಲ್ಲ! ತಾಲಿಬಾನ್​​ ಕಟ್ಟಾವಾದಕ್ಕೆ ಟ್ರೆಂಡಿಂಗ್ ಉತ್ತರ

    “ತಾಲಿಬಾನ್‌ಗೆ ಸಕ್ರಿಯ ಮತ್ತು ನಿಷ್ಕ್ರಿಯ ಬೆಂಬಲವನ್ನು ಒದಗಿಸುವುದು ಸೇರಿದಂತೆ ಅಫ್ಘಾನ್ ವ್ಯವಹಾರಗಳಲ್ಲಿ ಪಾಕಿಸ್ತಾನವು ಸಕ್ರಿಯ – ವಿಚ್ಛಿದ್ರಕಾರಿ ಮತ್ತು ಅಸ್ಥಿರಗೊಳಿಸುವ ಪಾತ್ರ ವಹಿಸಿದೆ. ಅನೇಕ ವೀಕ್ಷಕರು ತಾಲಿಬಾನ್‌ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಪಾಕಿಸ್ತಾನಕ್ಕೆ ಲಭಿಸಿರುವ ಪ್ರಮುಖ ವಿಜಯವೆಂದು ಪರಿಗಣಿಸುತ್ತಾರೆ. ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಮತ್ತು ಭಾರತೀಯ ಪ್ರಭಾವವನ್ನು ಸೀಮಿತಗೊಳಿಸುವ ದಶಕಗಳ ಪ್ರಯತ್ನವನ್ನು ಪಾಕ್​ ಮುಂದುವರೆಸಿದೆ” ಎಂದು ವರದಿ ಹೇಳಿದೆ.

    ಆದರೆ, ಪಾಕಿಸ್ತಾನದ ಉನ್ನತ ಅಧಿಕಾರಿಗಳು ತಾಲಿಬಾನ್​ ಪರ ಹೇಳಿಕೆಗಳನ್ನು ನೀಡುತ್ತಿದ್ದರೂ, ಅಫ್ಘಾನಿಸ್ತಾನ ತಾಲಿಬಾನ್​ ನಿಯಂತ್ರಣಕ್ಕೆ ಬಂದಿರುವುದು ಇಸ್ಲಮಾಬಾದ್​​ಗೂ ಹಲವು ಸವಾಲು ಮತ್ತು ತೊಡಕುಗಳನ್ನು ಉಂಟುಮಾಡಬಹುದು. “ಇನ್ನೂ, ಪಾಕಿಸ್ತಾನಿ ಅಧಿಕಾರಿಗಳು ತಾಲಿಬಾನ್ ಮೇಲೆ ತಮ್ಮ ಪ್ರಭಾವ ಸೀಮಿತವಾಗಿದೆ ಎಂದು ಹೇಳಿಕೊಳ್ಳುತ್ತಾರೆ” ಎಂದು ವರದಿ ಹೇಳಿದೆ. (ಏಜೆನ್ಸೀಸ್)

    VIDEO| ಮಗುವಿಗೂ ಬೇಕು, ಮಂಗನಿಗೂ ಬೇಕು ಈ ಮೊಬೈಲು!

    ಕೆಲಸದಿಂದ ತೆಗೆಯುವುದಾಗಿ ಬೆದರಿಸಿ ಲೈಂಗಿಕ ಕಿರುಕುಳ; ಸರ್ಕಾರಿ ಅಧಿಕಾರಿ ಜೈಲಿಗೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts