More

    ಅಫ್ಘನ್​ ಮಹಿಳೆಯರು ಹಿಜಾಬ್​ ತೊಡುವುದಿಲ್ಲ! ತಾಲಿಬಾನ್​​ ಕಟ್ಟಾವಾದಕ್ಕೆ ಟ್ರೆಂಡಿಂಗ್ ಉತ್ತರ

    ವಾಷಿಂಗ್ಟನ್: ಇತ್ತೀಚೆಗೆ ಕಾಬುಲ್​​ನಲ್ಲಿ ಪೂರ್ಣ ಕಪ್ಪು ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡಿದ್ದ ಕೆಲವು ಮಹಿಳೆಯರು ಕಟ್ಟಾವಾದಿ ತಾಲಿಬಾನ್​ ಪರ ರಾಲಿಯೊಂದನ್ನು ನಡೆಸಿದ್ದು ವರದಿಯಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಅಫ್ಘನ್​-ಅಮೇರಿಕನ್​ ಇತಿಹಾಸಕಾರ್ತಿಯೊಬ್ಬರು ತಾಲಿಬಾನ್​ ಹೇರುತ್ತಿರುವ ಕಪ್ಪು ಉಡುಗೆಗಳ ಸಂಸ್ಕೃತಿ ನಮ್ಮದಲ್ಲ. ನಮ್ಮದು ರಂಗುರಂಗಿನ ಉಡುಗೆಗಳ ಸಂಸ್ಕೃತಿ ಎಂದು ಕೂಗೆಬ್ಬಿಸಿದ್ದಾರೆ.

    ಪ್ರಸ್ತುತ ಅಮೆರಿಕದ ಮೇರಿಲ್ಯಾಂಡಿನ ಗ್ಲೇನ್​ವುಡ್​ ಮಿಡಲ್​ಸ್ಕೂಲ್​ನಲ್ಲಿ ಇತಿಹಾಸ ಶಿಕ್ಷಕಿಯಾಗಿರುವ ಅಫ್ಘಾನಿಸ್ತಾನ ಮೂಲದ ಬಹಾರ್​ ಜಲಾಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಇದಕ್ಕಾಗಿ #DoNotTouchMyClothes ಮತ್ತು #AfghanistanCulture ಎಂಬ ಹ್ಯಾಷ್​ಟ್ಯಾಗ್​ಗಳನ್ನು ಸೃಷ್ಟಿಸಿ, ನಿಜವಾದ ಅಫ್ಘನ್​ ಪರಂಪರೆಯಲ್ಲಿರುವ ಮಹಿಳೆಯರ ಉಡುಗೆತೊಡುಗೆಗಳನ್ನು ಬಿಂಬಿಸುವ ಪ್ರಯತ್ನ ಕೈಗೊಂಡಿದ್ದಾರೆ. ಈ ಹ್ಯಾಶ್​ಟ್ಯಾಗ್​ಗಳು ಜನಪ್ರಿಯಗೊಂಡಿದ್ದು, ಹಲವು ಅಫ್ಘನ್ ಮಹಿಳೆಯರು ರಂಗುರಂಗಾದ, ಎಂಬ್ರಾಯ್ಡರಿಸಹಿತ ಉಡುಗೆಗಳನ್ನು ತೊಟ್ಟು ಮುಖದಲ್ಲಿ ನಗುವರಳಿಸಿರುವ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.

    ಪ್ರಗತಿಪರ ಸರ್ಕಾರವಿದ್ದ ಅಫ್ಘಾನಿಸ್ತಾನದಲ್ಲೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಾಠ ಮಾಡಿರುವ ಜಲಾಲಿ, ಜಗತ್ತು ಕಪ್ಪು ಬಟ್ಟೆಗಳನ್ನೇ ಅಫ್ಘನ್​ ಪಾರಂಪರಿಕ ಉಡುಗೆ ಎಂದು ತಿಳಿಯಬಾರದು. ನಮ್ಮ ಪರಂಪರೆ ಮತ್ತು ಸಂಸ್ಕೃತಿ ತಪ್ಪಾಗಿ ಬಿಂಬಿತವಾಗಬಾರದು ಎಂದಿದ್ದಾರೆ. “ಅಫ್ಘನ್​ ಮಹಿಳೆಯರು ಹಿಜಾಬ್​ ತೊಡುವುದಿಲ್ಲ. ನಾವು ಕೂದಲನ್ನು ಹೊರಗೆಬಿಟ್ಟು ಸಡಿಲವಾಗಿ ಕಟ್ಟಿದ ಶಿಫಾನ್​ ಹೆಡ್​ಸ್ಕಾರ್ಫನ್ನು ತೊಡುತ್ತೇವೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ನೀವು ಯಾವಾಗಲೂ ಖುಷಿಯಿಂದ ಇರಬೇಕಾ? ಹಾಗಾದ್ರೆ ಅಮಲಾ ಪೌಲ್​ ಹೇಳೋ ಮಾತನೊಮ್ಮೆ ಕೇಳಿ..!

    ಮತ್ತೆ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳ ಆಳ್ವಿಕೆಯಲ್ಲಿ ಮಹಿಳೆಯರಿಗೆ ಹಿಜಾಬ್​ ಸೇರಿದಂತೆ ಹಲವು ನಿರ್ಬಂಧಗಳ ಸಂಕೋಲೆ ಎದುರಾಗಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಾಗಿ ಹೇಳಿಕೊಂಡಿರುವ ತಾಲಿಬಾನ್​ ನಾಯಕರು, ಮಹಿಳೆಯರು ಯೂನಿವರ್ಸಿಟಿಗಳಲ್ಲಿ ಕಲಿಯಬಹುದು. ಆದರೆ, ತರಗತಿಗಳು ಲಿಂಗದ ಆಧಾರದ ಮೇಲೆ ಪ್ರತ್ಯೇಕವಾಗಿರಬೇಕು ಅಥವಾ ಪರದೆಯಿಂದ ವಿಭಜಿತಗೊಂಡಿರಬೇಕು ಎಂದಿದ್ದಾರೆ. ವಿದ್ಯಾರ್ಥಿನಿಯರು ಇಡೀ ದೇಹ ಮತ್ತು ಮುಖವನ್ನು ಮುಚ್ಚಿ, ಕಣ್ಣುಗಳಿಗೆ ಮಾತ್ರ ತೆರೆದ ಜಾಗ ಇರುವ ಅಬಯಾ ರೋಬ್​ ಮತ್ತು ನಿಖಾಬ್​ ಧರಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ವಿದೇಶ ಪ್ರಯಾಣಕ್ಕೆ ಸೌಕರ್ಯ: ಕೋವಿನ್​ ಸರ್ಟಿಫಿಕೇಟ್​ಗೆ ಜನ್ಮದಿನಾಂಕ ಅಪ್ಡೇಟ್​ ಮಾಡಲು ಅವಕಾಶ

    ಗಡಿಯಾಚೆಗಿನ ಭಯೋತ್ಪಾದನೆ, ಪ್ರಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಕೈಜೋಡಿಸಿದ ಭಾರತ-ಅಮೆರಿಕ

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts