ಗಡಿಯಾಚೆಗಿನ ಭಯೋತ್ಪಾದನೆ, ಪ್ರಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಕೈಜೋಡಿಸಿದ ಭಾರತ-ಅಮೆರಿಕ

ವಾಷಿಂಗ್ಟನ್​: ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿರುವ ಭಾರತ ಮತ್ತು ಅಮೆರಿಕ ಸರ್ಕಾರಗಳು, ಆತಂಕವಾದಿ ದಾಳಿಗಳನ್ನು ನಡೆಸಲು ಅಥವಾ ಯೋಜಿಸಲು ಕಾರಣವಾಗಬಲ್ಲಂಥ ಯಾವುದೇ ಗುಂಪುಗಳಿಗೆ ಆರ್ಥಿಕ ಅಥವಾ ಮಿಲಿಟರಿ ಸಹಾಯವನ್ನು ನಿರಾಕರಿಸುವ ಮಹತ್ವವನ್ನು ಸಾರಿವೆ. ಇದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ನೀಡುತ್ತಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದು ಅಮೆರಿಕದ ವಾಷಿಂಗ್ಟನ್​​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ದ್ವಿಪಕ್ಷೀಯ ಮಾತುಕತೆಯ ನಂತರ ಈ ನಿಟ್ಟಿನಲ್ಲಿ ಜಂಟಿ ಹೇಳಿಕೆ ನೀಡಲಾಗಿದೆ. ಜಾಗತಿಕ … Continue reading ಗಡಿಯಾಚೆಗಿನ ಭಯೋತ್ಪಾದನೆ, ಪ್ರಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಕೈಜೋಡಿಸಿದ ಭಾರತ-ಅಮೆರಿಕ