ಟಿಕೆಟ್ ಪಡೆದ ಬಿವೈ‌ ವಿಜಯೇಂದ್ರ ಆಪ್ತ; ಬ್ಯಾಟರಾಯನಪುರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!

byatarayanapura
Published on

ಬ್ಯಾಟರಾಯನಪುರ: ತಮ್ಮೇಶ್ ಗೌಡಗೆ ಟಿಕೆಟ್ ಕೊಟ್ಟ ಹಿನ್ನೆಲೆ ಮುನೀಂದ್ರ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ‌ ನಡೆ‌ ಬಗ್ಗೆ ಚರ್ಚಿಸಲು‌ ಮುನೇಂದ್ರ ಕುಮಾರ್ ಬೆಂಬಲಿಗರ ಸಭೆ ಕರೆದಿದ್ದಾರೆ.

ಮುನೇಂದ್ಟಿರ ಕುಮಾರ್​ಗೆ ಟಿಕೆಟ್ ಸಿಗಿದದ್ದಕ್ಕೆ ಸಿಟ್ಟಾದ ಬೆಂಬಲಿಗರು
ನಿಮ್ಮನ್ನು ನಾವೇ ಗೆಲ್ಲಿಸುತ್ತೇವೆ ಎನ್ನುತ್ತಿರುವ ಬೆಂಬಲಿಗರು

ಕಳೆದ ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಮುನೇಂದ್ರ ಕುಮಾರ್ ಅಬ್ಬರದ ಪ್ರಚಾರ ಮಾಡಿದ್ದರು. ಆದರೆ ಬಿವೈ ವಿಜಯೇಂದ್ರ ಆಪ್ತ ತಮ್ಮೇಶ್​ ಗೌಡಗೆ ಟಿಕೆಟ್​ ಸಿಕ್ಕಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಮುನೇಂದ್ರ ಕುಮಾರ್​ ಇದೀಗ ತಮ್ಮ ಮುಂದಿನ ನಡೆ ಬಗ್ಗೆ ಬೆಂಬಲಿಗರ ಜೊತೆ‌ ಸಭೆ‌ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಇನ್ನು ಇವರ ಕೆಲ ಬೆಂಬಲಿಗರಂತೂ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿ, ನಾವೇ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net