ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಚೆಸ್​​ ಆಡಿ ಸಮಯ ಕಳೆಯುತ್ತಿದ್ದಾರೆ ರೆಬೆಲ್​ ಶಾಸಕರು!

rebel-sena-mla
Published on

ಗುವಾಹಟಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿ, ಸದ್ಯ ಸುಪ್ರೀಂಕೋರ್ಟ್​ ತೀರ್ಪಿನಿಂದ ನಿರಾಳರಾಗಿರುವ ರೆಬೆಲ್​ ಶಾಸಕರು ಈಗ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾಲ ಕಳೆಯುತ್ತಿದ್ದಾರೆ.

ಸದ್ಯ ನಿರಾಳರಾಗಿರುವ ಶಾಸಕರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಬದಲಾಗಿ ಚೆಸ್​​ ಸೇರಿದಂತೆ ಹಲವು ಆಟಗಳನ್ನು ಆಡಿ ನಿರಾರಳರಾಗುತ್ತಿದ್ದಾರೆ. ಕೆಲ ಸಭೆಗಳಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ, ಯಾವುದೇ ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಂಡಿಲ್ಲ. ಚೆಸ್​, ಲೂಡೋ ಸೇರಿದಂತೆ ಒಳಾಂಗಣ ಆಟಗಳನ್ನು ಆಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ ಯಾವೊಬ್ಬ ಶಾಸಕರೂ ಹೋಟೆಲ್​ನಿಂದ ಹೊರಹೋಗದಂತೆ ರೆಬೆಲ್​ ನಾಯಕ ಏಕನಾಥ್​ ಶಿಂಧೆ ಅವರ ಆದೇಶವನ್ನು ಬಂಡಾಯ ಶಾಸಕರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಶಿವಸೇನೆಯ 38 ಶಾಸಕರು ಹಾಗೂ 10 ಪಕ್ಷೇತರರು ಗುವಾಹಟಿಯ ಹೋಟೆಲ್​ನಲ್ಲಿ ಬೀಡುಬಿಟ್ಟಿದ್ದಾರೆ. ಜೂನ್​ 21 ರಿಂದ ಅಲ್ಲೇ ಉಳಿದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net