

ಹೈದ್ರಾಬಾದ್: ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ( Naga Chaitanya - Sobhita Dhulipala ) ಡಿಸೆಂಬರ್ 4 ರಂದು ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ತಮ್ಮ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಇತ್ತೀಚೆಗೆನೀಡಿದ ಸಂದರ್ಶನದಲ್ಲಿ, ಚೈತನ್ಯ ತಮ್ಮ ಸಂಬಂಧ ಹೇಗೆ ಪ್ರಾರಂಭವಾಯಿತು ಮತ್ತು ಶೋಭಿತಾಳೊಂದಿಗೆ ಪ್ರೀತಿಯಲ್ಲಿ ಬೀಳಲು ಕಾರಣವನ್ನು ಹಂಚಿಕೊಂಡಿದ್ದಾರೆ.
ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಪ್ರೀತಿ ಹೇಗೆ ಶುರುವಾಯಿತು, ಹೇಗೆ ಪರಿಚಯವಾಯಿತು ಎಂದು ಜೋಡಿ ಹೇಳಿ ಕೊಂಡಿದೆ.
ಮೊದಲನೆಯದಾಗಿ, 2018 ರಲ್ಲಿ, ನಾಗಾರ್ಜುನ ಅವರಿಗೆ ಸಂಬಂಧಿಸಿದ ಸಮಾರಂಭದಲ್ಲಿ, ಈ ಇಬ್ಬರೂ ಮೊದಲ ಬಾರಿಗೆ ಆಕಸ್ಮಿಕವಾಗಿ ಭೇಟಿಯಾಗಿದ್ದೇವು. ಆಗ ಇಬ್ಬರೂ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ, ನಂತರವೂ ಭೇಟಿಯಾಗಲಿಲ್ಲ ಎಂದಿದ್ದಾರೆ.
2021 ರಲ್ಲಿ ನಾಗ ಚೈತನ್ಯ ಅವರು ಸಮಂತಾಗೆ ವಿಚ್ಛೇದನ ನೀಡಿದ ಕೆಲವು ತಿಂಗಳ ನಂತರ, ಏಪ್ರಿಲ್ 2022 ರಲ್ಲಿ ನಾಗ ಚೈತನ್ಯ ಅವರು ಪೋಸ್ಟ್ ಮಾಡಿದ Instagram ಸ್ಟೋರಿಗೆ ಶೋಭಿತಾ ಉತ್ತರಿಸಿದ್ದಾರೆ.
ಚೈತು ಅವರ ಬಳಿ ರೆಸ್ಟೋರೆಂಟ್ ಇರುವುದು ಗೊತ್ತಾಗಿದೆ. ಅದಕ್ಕೆ ಸಂಬಂಧಿಸಿದಂತೆ ಚೈತು ಇನ್ಸ್ಟಾಗ್ರಾಂನಲ್ಲಿ ಆಹಾರದ ಬಗ್ಗೆ ಪೋಸ್ಟ್ ಮಾಡಿದ್ದು, ಅದಕ್ಕೆ ಶೋಭಿತಾ ಉತ್ತರಿಸಿದ್ದರು. ಶೋಭಿತಾ ಒಳ್ಳೆಯ ಆಹಾರಪ್ರಿಯಳಾದ್ದರಿಂದ ಚೈತನ್ಯ ಇನ್ಸ್ಟಾ ಸ್ಟೋರಿಗೆ ಉತ್ತರಿಸಿದ ಅವರು ಇನ್ಸ್ಟಾಗ್ರಾಮ್ ಮೂಲಕ ಅವರ ಪರಿಚಯ ಪ್ರಾರಂಭವಾಯಿತು.
ಕೆಲವು ವರ್ಷಗಳ ಕಾಲ Instagram ನಲ್ಲಿ ಚಾಟ್ ಮಾಡಿದ್ದೇವೆ ಮತ್ತು ನಂತರ ಪರಸ್ಪರ ಭೇಟಿಯಾಗಲು ಪ್ರಾರಂಭಿಸಿದೇವು. ಕೆಲವು ವರ್ಷಗಳ ಕಾಲ ಫೋನ್ನಲ್ಲಿ ಮಾತನಾಡಿದ ನಂತರ, ಮುಂಬೈನ ಕೆಫೆಯಲ್ಲಿ ಮೊದಲ ಬಾರಿಗೆ ಭೇಟಿಯಾದೇವು. ಆಗ ಸೋಭಿತಾ ಮುಂಬೈನಲ್ಲಿದ್ದರು, ಹಾಗಾಗಿ ಚೈತನ್ಯ ಹೈದರಾಬಾದ್ನಿಂದ ಮುಂಬೈಗೆ ವಿಮಾನದಲ್ಲಿ ಹೋಗಿ ಅಲ್ಲಿ ಅವರನ್ನು ಭೇಟಿಯಾದರು. ಅಂದಿನಿಂದ ಇಬ್ಬರ ಪ್ರೇಮ ಪಯಣ ಆರಂಭವಾಗಿದೆ ಎಂದಿದ್ದಾರೆ.