ಪೊಲೀಸ್ ವರಿಷ್ಠಾಧಿಕಾರಿಯಾಗಿ ಮರು ನೇಮಕ

Ksd_Shilpa
Published on

ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕನ್ನಡತಿ ಡಿ.ಶಿಲ್ಪಾ ಅವರನ್ನು ಕಾಸರಗೋಡಿಗೆ ಮತ್ತೆ ನಿಯೋಜಿಸಲಾಗಿದೆ.

ವರ್ಗಾವಣೆಗೊಂಡು ತೆರಳುತ್ತಿರುವ ಕಾಸರಗೊಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಅವರ ಸ್ಥಾನಕ್ಕೆ ಶಿಲ್ಪಾ ಅವರನ್ನು ನೇಮಿಸಲಾಗುತ್ತಿದೆ.

ಪ್ರೊಬೆಶನರಿ ಎಸ್ಪಿಯಾಗಿ ಕಾಸರಗೋಡಿನಲ್ಲಿ ಕರ್ತವ್ಯ ಆರಂಭಿಸಿದ್ದ ಶಿಲ್ಪಾ ಡಿ. ಅವರು 2020ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಕಾಸರಗೋಡಿನ ಪ್ರಥಮ ಮಹಿಳಾ ಎಸ್.ಪಿ ಎಂಬ ಹೆಗ್ಗಳಿಕೆಯೂ ಅವರಿಗಿತ್ತು. ಪ್ರಸಕ್ತ ರಾಜ್ಯ ಪೊಲೀಸ್ ಅಕಾಡೆಮಿಯ ಪ್ರೊಕ್ಯೂರ್‌ಮೆಂಟ್ ಅಸಿಸ್ಟೆಂಟ್ ಇನಸ್ಪೆಕ್ಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net