ಅಪಘಾತದಲ್ಲಿ ಮೃತಪಟ್ಟ ‘ಪ್ಯಾಟೆ ಹುಡ್ಗೀರ್​ ಹಳ್ಳಿ ಲೈಫ್’​ ಸೀಸನ್ 4ರ ವಿಜೇತೆ

mebina
Published on

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್​ 4 ರಿಯಾಲಿಟಿ ಶೋದ ವಿನ್ನರ್​ ಮೆಬಿನಾ ಮೈಕಲ್​ (22) ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೇ. 26ರಂದು ಚೆನ್ನರಾಯಪಟ್ಟಣದ ಬೆಳ್ಳೂರು ಬಳಿ ಮೆಬಿನಾ ಇದ್ದ ಕಾರು ಮತ್ತು ಟ್ರ್ಯಾಕ್ಟರ್​ ನಡುವೆ ಡಿಕ್ಕಿ ಸಂಭವಿಸಿದ್ದರ ಪರಿಣಾಮ ಮೆಬಿನಾ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರನ್ನು ನಾಗಮಂಗಲದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂದಹಾಗೆ, ಮಂಗಳವಾರ ಸಂಜೆ ಹುಟ್ಟೂರು ಕೊಡಗಿನ ಸೋಮವಾರಪೇಟೆಯ ತಾಲೂಕಿನ ಐಗೂರು ಗ್ರಾಮದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಮೆಬಿನಾ ಸಾವಿನ ಬಗ್ಗೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋದ ನಿರೂಪಕ ಅಕುಲ್​ ಬಾಲಾಜಿ ಟ್ವಿಟರ್ ಪೋಸ್ಟ್​ನಲ್ಲಿ ಮೆಬಿನಾ ಬಗ್ಗೆ ಸಂತಾಪ ಸೂಚಿಸಿ ಟ್ವಿಟ್​ ಮಾಡಿದ್ದಾರೆ. ‘ನಿಜಕ್ಕೂ ಇದು ಶಾಕಿಂಗ್​ ಸುದ್ದಿ. ಮೆಬಿನಾ ನನ್ನ ಫೇವರಿಟ್​ ಸ್ಫರ್ಧಿ. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದಿದ್ದಾರೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಹುತೇಕ ಕಾರ್ಯಕ್ರಮಗಳು ಮರುಪ್ರಸಾರ ಆರಂಭಿಸಿವೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್-4 ಸಹ ಶುರುವಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net