ಸಮಾಜಕ್ಕೆ ಪೂರಕ ಬದುಕು ಅಗತ್ಯ : ವಿಖ್ಯಾತಾನಂದ ಸ್ವಾಮೀಜಿ ಅಭಿಪ್ರಾಯ

New Project (35)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ನಾವು ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯ. ನಾವೆಂದಿಗೂ ಸಮಾಜಕ್ಕೆ ಭಾರವಾಗದೆ, ಪೂರಕವಾಗಿ ಉತ್ತಮ ಮನುಷ್ಯರಾಗಿ ಬದುಕಬೇಕಿದೆ ಎಂದು ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಹಾಗೂ ಪಂಚಲೋಹ ವಿಗ್ರಹ ಪ್ರತಿಷ್ಠಾಪನಾ ಸಮಿತಿ ಉಳ್ಳಾಲ ವಲಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹ ವಿಗ್ರಹದ ಪುನಃ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ ಹಾಗೂ ಸಂಘ 44ನೇ ವಾರ್ಷಿಕೋತ್ಸವ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಂಕನಾಡಿ ಶ್ರೀ ಬ್ರಹ್ಮಶ್ರೀ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರೋಡಿ ಸಮಾರಂಭ ಉದ್ಘಾಟಿಸಿದರು. ಬೆಂಗಳೂರು ಬಿಲ್ಲವ ಅಸೋಶಿಯೇಶನ್‌ನ ಗೌರವಾಧ್ಯಕ್ಷ ಗೋಪಾಲಕೃಷ್ಣ ನೆಕ್ಕಿತ್ತಪುಣಿ, ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಕೊಣಾಜೆ ಬೊಲ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಅಧ್ಯಕ್ಷ ಪ್ರಸಾದ್ ರೈ ಹೊಸಮನೆ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಕಿಶೋರ್ ಕುವಾರ್ ಮುಂಬಯಿ, ಪಂಚಲೋಹ ವಿಗ್ರಹ ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ.ಟಿ.ಸುವರ್ಣ, ಡಾ.ಶ್ವೇತಾ ಆಶಿತ್, ದೇವಕಿ ಆರ್.ಉಳ್ಳಾಲ್, ರೋಹಿದಾಸ್ ಪಾಂಡೇಶ್ವರ್, ಕೆ.ಪಿ.ಸುರೇಶ್, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ.ಕುಂದರ್, ಗ್ರಾಮಚಾವಡಿ ಯುವವಾಹಿನಿ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಧಕರನ್ನು ಗೌರವಿಸಲಾಯಿತು. ಯಶವಂತ ದೇರಾಜೆ ಸ್ವಾಗತಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘ ರವೀಂದ್ರ ಬಂಗೇರ ಪ್ರಸ್ತಾವಿಸಿದರು.

ಮನುಕುಲದ ಒಳ್ಳೆಯತನಕ್ಕೆ, ಲೋಕದ ಉದ್ದಾರಕ್ಕಾಗಿ ಹೋರಾಡಿದ, ಜಾತಿ, ಭೇದ, ಮತ ದ್ವೇಷ ಇಲ್ಲದ, ಉದಾತ್ತ ಮನೋಭಾವದ ವಿಶ್ವಕಂಡ ಮಹಾನ್ ಸಂತ ನಾರಾಯಣ ಗುರುವರ್ಯರ ಚಿಂತನೆ ನಮಗೆಲ್ಲರಿಗೂ ಆದರ್ಶ. ಅವರ ಕಾಯಕಲ್ಪವನ್ನು ನಾವು ಅನುಸ್ಮರಣೆ ವಾಡಬೇಕಿದೆ. ಆ ನಿಟ್ಟಿನಲ್ಲಿ ಸವಾಜಪರ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವ ಗ್ರಾಮಚಾವಡಿಯ ನಾರಾಯಣ ಗುರು ಸೇವಾ ಸಂಘ ಕಾರ್ಯ ಮಾ ದರಿ. ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲೂರು ಮಠ https://www.vijayavani.net/tribute-to-dr-venkatramana-holla https://www.vijayavani.net/fire-accident-11

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net