ಪಂತ್ ಶತಕ, ಮಾರ್ಷ್​ ಸ್ಫೋಟಕ ಅರ್ಧಶತಕ; ಆರ್​ಸಿಬಿಗೆ 228 ರನ್​ಗಳ ಸವಾಲಿನ​ ಗುರಿ | RCB vs LSG

ವಿಜಯವಾಣಿ - 2025-05-27T210935.529
Published on

RCB vs LSG: ಇಂದು (ಮೇ.27) ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿಗೆ ಇದೀಗ ಸವಾಲಿನ ಗುರಿ ಎದುರಾಗಿದೆ.

ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಎಲ್​ಎಸ್​ಜಿ, 20 ಓವರ್​ ಮುಕ್ತಾಯಕ್ಕೆ 3 ವಿಕೆಟ್​ ಕಳೆದುಕೊಂಡು 227 ರನ್ ಗಳಿಸಿತು. ಆರಂಭಿಕರಾದ ಮಿಚೆಲ್​ ಮಾರ್ಷ್ (37 ಎಸೆತ, 67 ರನ್​)​ ಮತ್ತು ಕ್ಯಾಪ್ಟನ್​ ರಿಷಭ್ ಪಂತ್ (61 ಎಸೆತ, 118 ರನ್) ಸ್ಫೋಟಕ ಇನ್ನಿಂಗ್ಸ್​ ತಂಡದ ಮೊತ್ತವನ್ನು 200ರ ಗಡಿದಾಟಿಸಿತು. 227 ರನ್​ಗಳ ಬೃಹತ್​ ಹಾಗೂ ಸವಾಲಿನ ಗುರಿಯನ್ನು ಆರ್​ಸಿಬಿ ಬೆನ್ನಟ್ಟಲಿದೆಯಾ ಅಥವಾ ಸೋತು, ಅಂಕಪಟ್ಟಿಯ ಅಗ್ರ-2 ಸ್ಥಾನವನ್ನು ಕಳೆದುಕೊಳ್ಳಲಿದೆಯಾ? ಎಂಬುದನ್ನು ಎರಡನೇ ಇನ್ನಿಂಗ್ಸ್​ ನೋಡಿ ತಿಳಿಯಬೇಕಿದೆ.

ಬ್ಯಾಟಿಂಗ್ ವಿವರ

  • ಮಿಚೆಲ್​ ಮಾರ್ಷ್​ (37 ಎಸೆತ, 67 ರನ್​)
  • ಮ್ಯಾಥ್ಯೂವ್​ ಬ್ರೀಟ್ಸ್ಕಿ (12 ಎಸೆತ 14 ರನ್​)
  • ರಿಷಭ್ ಪಂತ್​ (61 ಎಸೆತ, 118 ರನ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net