

ಬೆಂಗಳೂರು: ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ ಟೂರ್ನಿಯ 18ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲ ಆಟಗಾರರು (ಹಳೆಯ&ಹೊಸ) ತವರು ಮೈದಾನದಲ್ಲಿ ಅಭಿಮಾನಿಗಳ ಎದುರು ಮೊದಲ ಬಾರಿಗೆ ಕಾಣಿಸಿಕೊಂಡರು. ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ, ಅಭಿಮಾನಿಗಳು ಹಾಗೂ ಆಟಗಾರರ ನಡುವಿನ ಭೇಟಿಗೆ ಸಾ ಎನಿಸಿತು. ಜತೆಗೆ ಸಂಗೀತ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿತು.
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಈ ಬಾರಿ ಹೊಸದಾಗಿ ಆರ್ಸಿಬಿ ತಂಡಕ್ಕೆ ಸೇರಿರುವ ಲಿಯಾಮ್ ಲಿವಿಂಗ್ ಸ್ಟೋನ್, ಫಿಲ್ ಸಾಲ್ಟ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಹಾಜರಿದ್ದರು. ಇವರೆಲ್ಲರ ನಡುವೆ ಆರ್ಸಿಬಿಗೆ ಮರಳಿರುವ ಕನ್ನಡಿಗ ದೇವದತ್ ಪಡಿಕ್ಕಲ್, ಆಲ್ರೌಂಡರ್ ಮನೋಜ್ ಭಾಂಡಗೆ ಸಹ ತಂಡದ ಮೊದಲ ಪೂರ್ಣ ಅಭ್ಯಾಸದಲ್ಲಿ ಭಾಗವಹಿಸಿದರು. ಅಭ್ಯಾಸದ ಜತೆಗೆ ಅಭಿಮಾನಿಗಳಿಗೆ ಮನರಂಜನೆಯನ್ನೂ ನೀಡಿದ ಆಟಗಾರರು ಐಪಿಎಲ್ಗೆ ಸಜ್ಜಾಗಿರುವ ಸಂದೇಶ ನೀಡಿದರು. ಎರಡು ಗಂಟೆಗೂ ಅಧಿಕ ಸಮಯ ಎಲ್ಲ ಆಟಗಾರರು ಅಭ್ಯಾಸ ನಡೆಸಿದರು. ಆದರೆ ಹಿಂದಿನ 2 ಬಾರಿ ಆರ್ಸಿಬಿ ಮಾಜಿ ಆಟಗಾರರಿಗೆ ನೀಡುತ್ತ ಬಂದಿದ್ದ ಹಾಲ್ ಆ್ ೇಮ್ ಗೌರವ ನೀಡುವುದನ್ನು ಈ ಬಾರಿ ್ರಾಂಚೈಸಿ ಕೈಬಿಟ್ಟಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಬಾವುಟ ಹಾಗೂ ಕನ್ನಡಿಗರಿಗೆ ಹೆಚ್ಚಿನ ಒತ್ತು ನೀಡಿ ಗಮನಸೆಳೆಯಿತು.
ನಿಮ್ಮೆಲ್ಲರ ಪ್ರೀತಿ ನೀಡಿ...
"ರಜತ್ ಪಾಟೀದಾರ್ ಮುಂದಿನ ಹಲವು ವರ್ಷ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದು, ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರಿಗೂ ನಿಮ್ಮೆಲ್ಲರ ಪ್ರೀತಿ ನೀಡಿರಿ. ಟೂರ್ನಿಯಲ್ಲಿ ಯಶಸ್ವಿಯಾಗಲು ಬೇಕಿರುವ ಎಲ್ಲ ಅರ್ಹತೆಗಳು ಆತನಿಗಿದೆ' ಎಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಟಿ20 ನಿವೃತ್ತಿ ಬಳಿಕ ಮೊದಲ ಬಾರಿಗೆ ಚುಟುಕು ಲೀಗ್ನಲ್ಲಿ ಕಾಣಿಸಿಕೊಳ್ಳಲಿರುವ ಕೊಹ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ, "ಬೆಂಗಳೂರಿಗೆ ಆಗಮಿಸುವುದು ಯಾವಾಗಲೂ ಅದ್ಬುತ ಅನುಭವವಾಗಿದೆ. ಆರ್ಸಿಬಿ ತಂಡದಲ್ಲಿ ನನಗೆ 18ನೇ ವರ್ಷವಾಗಿದ್ದು, ಪ್ರತಿ ಸೀಸನ್ನಂತೆ ಈ ಬಾರಿಯೂ ಉತ್ಸುಕ ಹಾಗೂ ಸಂತೋಷದಿಂದ ಕಣಕ್ಕಿಳಿಯುವೆ. ನಾವು ಅದ್ಬುತ ತಂಡ ಹೊಂದಿದ್ದು, ಸಾಕಷ್ಟು ಯುವ ಪ್ರತಿಭೆಗಳಿಂದ ಕೂಡಿದೆ. ವೈಯಕ್ತಿಕವಾಗಿ ಈ ಸೀಸನ್ನಲ್ಲಿ ಆಡಲು ಬಹಳ ಉತ್ಸುಕನಾಗಿದ್ದೇನೆ' ಎಂದರು.
ವಿರಾಟ್ ಕೊಹ್ಲಿ, ಎಬಿಡಿ ಹಾಗೂ ಕ್ರಿಸ್ ಗೇಲ್ರಂಥ ಆಟಗಾರರು ಆರ್ಸಿಬಿ ತಂಡದಲ್ಲಿ ಆಡಿದ್ದು, ಈ ಮೂವರ ಆಟವನ್ನು ನೋಡುತ್ತ ಬೆಳೆದಿದ್ದೇನೆ. ಟೂರ್ನಿಯ ಆರಂಭದಿಂದಲೂ ಈ ್ರಾಂಚೈಸಿಯನ್ನು ಸಾಕಷ್ಟು ಪ್ರೀತಿಸಿದ್ದೇನೆ. ಟಿ20 ಲೀಗ್ನಲ್ಲಿ ದೊಡ್ಡ ತಂಡವನ್ನು ಮುನ್ನಡೆಸುವ ವಿಶೇಷ ಜವಾಬ್ದಾರಿ ಪಡೆದಿರುವುದಕ್ಕೆ ಅಪಾರ ಸಂತೋಷವಿದೆ.
> ರಜತ್ ಪಾಟೀದಾರ್, ಆರ್ಸಿಬಿ ನಾಯಕ
ಸಂಗೀತ ರಸದೌತಣ
ಅಂತಾರಾಷ್ಟ್ರೀಯ ಸ್ಟಾರ್ ಆಟಗಾರರ ಜತೆಗೆ ಸುಪ್ರಸಿದ್ದ ಗಾಯಕ&ಗಾಯಕಿಯರ ಸಂಗೀತದ ರಸದೌತಣವನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ 15 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆನಂದಿಸಿದರು. ಈ ಬಾರಿಯ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಿದ ್ರಾಂಚೈಸಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತ ಎನಿಸಿತು. ರಾಜ್ಯದ ಜನಪ್ರಿಯ ಗಾಯಕ ಸಂಜಿತ್ ಹೆಗ್ಡೆ, ಗಾಯಕಿ ಐಶ್ವರ್ಯ ರಂಗರಾಜನ್, ರ್ಯಾಪರ್ ಆಲ್ ಓಕೆ ಕನ್ನಡದ ಹಾಡುಗಳಿಗೆ ಧ್ವನಿಗೂಡಿಸಿದರೆ, ರ್ಯಾಪರ್ ಹಾಗೂ ರ್ಯಾಪರ್ ಮತ್ತು ಸಿಂಗರ್ ಹನುಮಾನ್ಕಿಂಡ್(ಸೂರಜ್ ಚೆರಕುಟ್ಟಿ) ಆಸ್ಟ್ರೆಲಿಯಾದ ಡಿಜೆ ಸಂಗೀತಕಾರ ಟಿಮ್ಮಿ ಟ್ರಂಪೆಟ್ (ಟಿಮೋಥಿ ಜುಡ್ ಸ್ಮಿತ್) ತಂಡ ಸಂಗೀತದೊಂದಿಗೆ ಮನರಂಜನೆ ಒದಗಿಸಿದರು.
ಪುನೀತ್ ಸ್ಮರಣೆ
ಆರ್ಸಿಬಿ ತಂಡದ ಮಾಜಿ ರಾಯಭಾರಿ, ನಟ ದಿ.ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ವಿಶೇಷ ಗೌರವ ನೀಡಿ ಸ್ಮರಿಸಲಾಯಿತು. ಈ ವೇಳೆ ಮೈದಾನದಲ್ಲಿ ಹಾಜರಿದ್ದ ನಟ ಡಾ.ಶಿವರಾಜಕುಮಾರ್ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ನೀಡಿದರು.
ಮೈದಾನದ ಆಚೆಗೆ ಸಿಕ್ಸರ್...
ಅಭ್ಯಾಸದ ವೇಳೆ ಆಟಗಾರರ ಕೌಶಲ, ಸಾಮರ್ಥ್ಯ ಅನಾವರಣಕ್ಕೆ ರಜತ್ ಪಾಟೀದಾರ್ ಹಾಗೂ ವಿಕೆಟ್ ಕೀಪರ್&ಬ್ಯಾಟರ್ ಜಿತೇಶ್ ಶರ್ಮ ನೇತೃತ್ವದಲ್ಲಿ 2 ತಂಡ ರಚಿಸಿ ಕೆಲ ಚಾಲೆಂಜ್ ನೀಡಲಾಗಿತ್ತು. ಮೈದಾನದಿಂದ 2 ಬಾರಿ ಚೆಂಡನ್ನು ಹೊರಗೆ ಕಳುಹಿಸಿದ ವಿಂಡೀಸ್ನ ರೋಮಾರಿಯೊ ಶೆಾರ್ಡ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರು. ಜಿತೇಶ್ ಒಮ್ಮೆ ಚೆಂಡನ್ನು ಹೊರಗಟ್ಟಿ ಸವಾಲೆಸೆದರು. ಡೆತ್ ಬೌಲಿಂಗ್ ಚಾಲೆಂಜ್ನಲ್ಲಿ ವೇಗಿ ನುವಾನ್ ತುಷಾರ ನಿಖರವಾದ ಯಾರ್ಕರ್ ಮೂಲಕ ಗಮನ ಸೆಳೆದರು.