

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆಸೀಸ್ ತಾರೆ ಎಲ್ಲಿಸ್ ಪೆರ್ರಿ (90*ರನ್, 56 ಎಸೆತ, 9 ಬೌಂಡರಿ, 3 ಸಿಕ್ಸರ್, 10ಕ್ಕೆ 1 ವಿಕೆಟ್) ಆಲ್ರೌಂಡ್ ಆಟದ ನಡುವೆಯೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ಎದುರು ಸೂಪರ್ ಓವರ್ನಲ್ಲಿ 4 ರನ್ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ಸ್ಮೃತಿ ಮಂದನಾ ಪಡೆ ತವರು ಅಂಗಣದಲ್ಲಿ ಸತತ 2ನೇ ಬಾರಿ ನಿರಾಸೆ ಅನುಭವಿಸಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ತಂಡ ಪೆರ್ರಿ ಮತ್ತು ಡ್ಯಾನಿ ವ್ಯಾಟ್&ಹಾಡ್ಜ್ (57 ರನ್, 41 ಎಸೆತ, 4 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ನಿಂದ 6 ವಿಕೆಟ್ಗೆ 180 ರನ್ ಕಲೆಹಾಕಿತು. ಪ್ರತಿಯಾಗಿ ಯುಪಿ ಕೊನೇ ಎಸೆತದಲ್ಲಿ 180 ರನ್ಗಳಿಗೆ ಸರ್ವಪತನ ಕಂಡು ಟೈ ಸಾಧಿಸಿತು. ಇದು ಡಬ್ಲ್ಯುಪಿಎಲ್ನಲ್ಲಿ ಮೊಟ್ಟಮೊದಲ ಟೈ ಆಗಿದೆ. ನಂತರ ಸೂಪರ್ ಓವರ್ನಲ್ಲಿ ಯುಪಿ 1 ವಿಕೆಟ್ಗೆ 7 ರನ್ ಗಳಿಸಿದರೆ, ಆರ್ಸಿಬಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೇ ಓವರ್ನಲ್ಲಿ ರೋಚಕ ಟೈ
ಕೊನೇ ಓವರ್ನಲ್ಲಿ ಯುಪಿಗೆ 18 ರನ್ ಬೇಕಿದ್ದಾಗ ಎಕ್ಲೆಸ್ಟೋನ್, ವೇಗಿ ರೇಣುಕಾ ಸಿಂಗ್ ಎಸೆದ 2,3ನೇ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರೆ, 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕೊನೇ 2 ಎಸೆತಗಳಲ್ಲಿ 2 ರನ್ ಬೇಕಿದ್ದಾಗ, 5ನೇ ಎಸೆತದಲ್ಲಿ ಸಿಂಗಲ್ಸ್ ಕಸಿದರು. ಕೊನೇ ಎಸೆತದಲ್ಲಿ ಚೆಂಡು ಕ್ರಾಂತಿ ಗೌಡ್ ಬ್ಯಾಟ್ಗೆ ಸಿಗಲಿಲ್ಲ. ಎಕ್ಲೆಸ್ಟೋನ್ ಬೈಸ್ ರನ್ ಕದಿಯಲು ಯತ್ನಿಸಿದಾಗ ಕೀಪರ್ ರಿಚಾ ಘೋಷ್ ರನೌಟ್ ಮಾಡಿದ್ದರಿಂದ ಪಂದ್ಯ ಟೈ ಆಯಿತು.
ಆರ್ಸಿಬಿ: 5 ವಿಕೆಟ್ಗೆ 180 (ಸ್ಮ$ತಿ 6, ವ್ಯಾಟ್ 57, ಪೆರ್ರಿ 90*, ರಿಚಾ 8, ಕನಿಕಾ 5, ವೇರ್ಹ್ಯಾಂ 8, ಹೆನ್ರಿ 34ಕ್ಕೆ 1, ದೀಪ್ತಿ 42ಕ್ಕೆ 1, ತಹ್ಲಿಯಾ 30ಕ್ಕೆ 1). ಯುಪಿ ವಾರಿಯರ್ಸ್: 20 ಓವರ್ಗಳಲ್ಲಿ 180 (ನವಿಗಿರೆ 24, ವೃಂದಾ 14, ದೀಪ್ತಿ 25, ಶ್ವೇತಾ 31, ಗ್ರೇಸ್ 8, ಉಮಾ 14, ಎಕ್ಲೆಸ್ಟೋನ್ 33, ಸ್ನೇಹಾ 27ಕ್ಕೆ 3, ರೇಣುಕಾ 36ಕ್ಕೆ 2, ಗಾರ್ತ್ 40ಕ್ಕೆ 2, ಪೆರ್ರಿ 10ಕ್ಕೆ 1).
ಸೂಪರ್ ಓವರ್: ಯುಪಿ ವಾರಿಯರ್ಸ್ (ಬೌಲರ್: ಗಾರ್ತ್): 1 ವಿಕೆಟ್ಗೆ 8 (ಹೆನ್ರಿ 4).
ಆರ್ಸಿಬಿ (ಬೌಲರ್: ಎಕ್ಲೆಸ್ಟೋನ್): ವಿಕೆಟ್ ನಷ್ಟವಿಲ್ಲದೆ 4 (ರಿಚಾ 2, ಸ್ಮೃತಿ 2).