ವಿಜಯಾನಂದ ಟ್ರಾವೆಲ್ಸ್ ಆಯೋಜಿಸಿರುವ VRL​ ಬಸ್​​ ವರ್ಕ್​​ಶಾಪ್​​ನಲ್ಲಿ ಭಾಗಿಯಾಗಲಿದ್ದಾರೆ​ RCB ಆಟಗಾರ್ತಿ ಶ್ರೇಯಾಂಕಾ

shreyanka patil
Published on

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯಾಗಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಅವರು ಮಾರ್ಚ್​​ 24 ರಂದು ವಿಜಯಾನಂದ ಟ್ರಾವೆಲ್ಸ್ ವತಿಯಿಂದ ಹಮ್ಮಿಕೊಂಡಿರುವ ವಿಆರ್​ಎಲ್​ ಬಸ್​​ ವರ್ಕ್​​ ಶಾಪ್​ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

2024 ಮಾರ್ಚ್​​ 24 ರಂದು ಸಂಜೆ 4:00 ಗಂಟೆಗೆ ಮೈಸೂರು ರಸ್ತೆಯಲ್ಲಿರುವ ಆರ್​ವಿ ಕಾಲೇಜ್ ಬಳಿ ವಿಆರ್​ಎಲ್​ ಬಸ್​​ ವರ್ಕ್​​ ಶಾಪ್​ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ರಾಯಲ್ ಚಾಲೆಂಜರ್ಸ್ ಆಟಗಾರ್ತಿ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಅವರು ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದ ವೇಳೆ ಶ್ರೇಯಾಂಕಾ ಪಾಟೀಲ್​ ಅವರು ಅಭಿಮಾನಿಗಳ ಜತೆ ಸಮಾಲೋಚನೆ ನಡೆಸುವುದರ ಜತೆ ಬ್ಯಾಟ್​ ಹಿಡಿದು ಕ್ರಿಕೆಟ್​​ ಆಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಕುಟುಂಬದ ಜತೆ ಬಂದು ವೀಕ್ಷಿಸಲು ಅವಕಾಶ ಇರುತ್ತದೆ.

ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ (ಡಬ್ಲುಪಿಎಲ್​) ಆರ್​ಸಿಬಿ ತಂಡದ ಪರವಾಗಿ ನೀಡಿದ ಪ್ರದರ್ಶನದಿಂದ 2023ರಲ್ಲಿ ಭಾರತ ಮಹಿಳಾ ತಂಡದ ಪರ ಟಿ20 ಹಾಗೂ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಬೆಂಗಳೂರಿನ ಹುಡುಗಿ ಶ್ರೇಯಾಂಕಾ ಪಾಟೀಲ್​ ಭವಿಷ್ಯದ ತಾರೆ ಎನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net