More

    ಕರೊನಾ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ನೀಡುತ್ತಿರುವ ಕೊಡುಗೆಗಳೇನು ಗೊತ್ತೇ?

    ಬೆಂಗಳೂರು: ಐಪಿಎಲ್ ಮೊದಲ ಆವೃತ್ತಿಯಿಂದ ಸ್ಪರ್ಧೆಯಲ್ಲಿದ್ದು, ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲದಿದ್ದರೂ, ಅಭಿಮಾನಿಗಳ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ತಂಡ ಆರ್‌ಸಿಬಿ. ಐಪಿಎಲ್ 14ನೇ ಆವೃತ್ತಿಯಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿ ಗಮನಸೆಳೆದಿದ್ದ ಆರ್‌ಸಿಬಿ ತಂಡ ಇದೀಗ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವೂ ನೆರವಾಗಿದೆ. ಆರ್‌ಸಿಬಿಯ ಮಾತೃಸಂಸ್ಥೆ ‘ಡಿಯಾಜಿಯೊ’ ವತಿಯಿಂದ 45 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.

    ಆರ್‌ಸಿಬಿ ತಂಡ ಸಂಗ್ರಹಿಸಿರುವ 45 ಕೋಟಿ ರೂ. ಮೊತ್ತದಿಂದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಒಂದು ಜಿಲ್ಲೆಯಲ್ಲಿ ಆರೋಗ್ಯ ಸೇವೆ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಈ ಹಣವನ್ನು ಬಳಸಿಕೊಳ್ಳಲಾಗುವುದು. 21 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು. ಮತ್ತೆ 15 ಜಿಲ್ಲೆಗಳಲ್ಲಿ 16 ಬೆಡ್‌ಗಳ ಸುಸಜ್ಜಿತ ಮಿನಿ-ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.

    ಇದನ್ನೂ ಓದಿ: ಭಾರಿ ಚರ್ಚೆಗೆ ಕಾರಣವಾಗಿದೆ ವಿರಾಟ್ ಕೊಹ್ಲಿ ಹೊಸ ಲುಕ್!

    ತಕ್ಷಣದ ಅಗತ್ಯಕ್ಕೆ ಸ್ಪಂದಿಸುವಂತೆ 10 ರಾಜ್ಯಗಳ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್ ಬೆಡ್ ಸಹಿತ ವೈದ್ಯಕೀಯ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಆರ್‌ಸಿಬಿ ಫ್ರಾಂಚೈಸಿ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಮುನ್ನ ಬರೋಬ್ಬರಿ 11 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದರು. ಈ ಪೈಕಿ 2 ಕೋಟಿ ರೂ. ಮೊತ್ತವನ್ನು ವೈಯಕ್ತಿಕವಾಗಿ ನೀಡಿದ್ದರು.

    ಈ ಐಪಿಎಲ್ ತಂಡ ನನಗಿನ್ನೂ ವೇತನ ನೀಡಿಲ್ಲ ಎಂದ ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಡ್ಜ್!

    ಅಫ್ರಿದಿ ಮಗಳನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗನ ಹೆಸರು ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts