ಬೆಂಗಳೂರು ಕಾಲ್ತುಳಿತ ಪ್ರಕರಣ: ಹೈಕೋರ್ಟ್​ ಮೆಟ್ಟಿಲೇರಿದ ಆರ್​ಸಿಬಿ ಫ್ರಾಂಚೈಸಿ! | Bengaluru Stampede

ವಿಜಯವಾಣಿ (54)
Published on

Bengaluru Stampede: ಜೂನ್​ 04ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 11 ಅಭಿಮಾನಿಗಳ ಸಾವು ಪ್ರಕರಣ ದಿನದಿಂದ ದಿನಕ್ಕೆ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಆರ್​ಸಿಬಿ ಫ್ರಾಂಚೈಸಿ ಹೈಕೋರ್ಟ್ ಮೆಟ್ಟಿಲೇರಿದೆ.

ಕಾಲ್ತುಳಿತ ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಿರುವ ಹಿನ್ನೆಲೆ ಇದೀಗ ಆರ್​ಸಿಬಿ ಹೈಕೋರ್ಟ್​ ಮೊರೆ ಹೋಗಿದ್ದು, ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ.  ಡಿಎನ್​ಎ ಎಂಟರ್​ಟೈನ್​ಮೆಂಟ್​ ಮತ್ತು ಆರ್​ಸಿಬಿ ಫ್ರಾಂಚೈಸಿ ಸದ್ಯ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದೆ.

ಕಾಲ್ತುಳಿತಕ್ಕೆ ಬಲಿಯಾದ ಅಭಿಮಾನಿಗಳಿವರು

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ದ್ವಾರಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು ಹನ್ನೊಂದು ಅಭಿಮಾನಿಗಳು ಸಾವನ್ನಪ್ಪಿದ್ದು, 47 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಎ.ಎಸ್. ದಿವ್ಯಾಂಶಿ (13), ದೊರೆಶ (32), ಭೂಮಿಕ್ (20), ಸಹನಾ (25), ಅಕ್ಷತಾ (27), ಮನೋಜ್ (33), ಶ್ರವಣ್ (20), ದೇವಿ (29), ಶಿವಲಿಂಗ (17) ಮತ್ತು ಚಿನ್ಮಯಿ (19) ಮತ್ತು ಪ್ರಜ್ವಲ್ (20) ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net