ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ - ಕೆಕೆಆರ್ ಮುಖಾಮುಖಿ..?

rcb and kkr fro web
Published on

ಬೆಂಗಳೂರು: ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 13ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಸೆ.19 ರಿಂದ ಆರಂಭವಾಗಲಿರುವ ಲೀಗ್‌ಗೆ ಈಗಾಗಲೇ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಇದೀಗ ಎಲ್ಲರ ಚಿತ್ತ ಐಪಿಎಲ್ ವೇಳಾಪಟ್ಟಿಯತ್ತ ನೆಟ್ಟಿದೆ. ಆಗಸ್ಟ್ ಅಂತ್ಯದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುತ್ತಿದೆ ಎಂದು ಹೇಳಲಾಗಿತ್ತಾದರೂ ಭಾನುವಾರ (ಸೆ.6) ಪ್ರಕಟಿಸುವುದಾಗಿ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಆದರೆ, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ತಂಡಗಳು ಎದುರಾಗಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಕೆಕೆಆರ್-ಆರ್‌ಸಿಬಿ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಎದುರಾಗಲಿವೆ ಎಂದು ಗಾಳಿ ಸುದ್ದಿ ಹರಡಿದೆ. ಐಪಿಎಲ್ ಅಧಿಕೃತ ಟ್ವಿಟರ್ ಕೌಂಟ್‌ಡೌನ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಫೋಟೋ ಪ್ರಕಟಿಸಿರುವುದೇ ಇದಕ್ಕೆ ಕಾರಣ

ಐಪಿಎಲ್ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ಫೋಟೋ ಪ್ರಕಟಿಸಿದ್ದೆ ತಡ, ಅದೆಷ್ಟೋ ಮಂದಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ-ಕೆಕೆಆರ್ ತಂಡಗಳು ಎದುರಾಗಲಿವೆ ಎಂದುಕೊಂಡಿದ್ದಾರೆ. ಐಪಿಎಲ್‌ಗೆ 8 ತಂಡಗಳು ಅಭ್ಯಾಸದಲ್ಲಿ ತೊಡಗಿದ್ದು, ಶುಕ್ರವಾರದಿಂದ ಕೊನೇ ತಂಡವಾಗಿ ಸಿಎಸ್‌ಕೆ ತಂಡ ಅಭ್ಯಾಸ ಆರಂಭಿಸಿದೆ. ಸಿಎಸ್‌ಕೆ ತಂಡದ 2 ಆಟಗಾರರು ಸೇರಿದಂತೆ 13 ಮಂದಿಗೆ ಕರೊನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ಎಲ್ಲರ ವರದಿ ನೆಗೆಟಿವ್ ಬಂದಿದೆ.

ಐಪಿಎಲ್ ಟ್ವಿಟರ್ ಪ್ರಕಟಿಸಿದ ಫೋಟೋದಿಂದಾಗಿ ಹಲವು ಮಂದಿ ಮೊದಲ ಪಂದ್ಯದಲ್ಲಿ ಕೆಕೆಆರ್-ಆರ್‌ಸಿಬಿ ತಂಡಗಳು ಎದುರಾಗಲಿದ್ದೇವೆ ಎಂಬುದು ಅಭಿಮಾನಿಗಳ ಅನಿಸಿದೆ. ಕೆಕೆಆರ್ ತಂಡ 2012 ಹಾಗೂ 2014 ರಲ್ಲಿ ಚಾಂಪಿಯನ್‌ಷಿಪ್ ಪಟ್ಟ ಅಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ, ಕಳೆದ 12 ವರ್ಷಗಳಿಂದ 3 ಬಾರಿ ಫೈನಲ್‌ಗೇರಿದ್ದರೂ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net