

ಶಾರ್ಜಾ: ಆರ್‌ಸಿಬಿ ಅಭಿಮಾನಿಗಳ ಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ‘ಈ ಸಲ ಕಪ್ ನಮ್ದೆ..ಈ ಸಲ ಕಪ್ ನಮ್ದೆ’ ಎಂಬ ಉದ್ಘೋಷ ಮತ್ತೆ ಕೈಕೊಟ್ಟಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ವೈಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-14ರ ಎಲಿಮಿನೇಟರ್ ಹಂತದಲ್ಲೇ ಮುಗ್ಗರಿಸುವ ಮೂಲಕ ಸತತ 14ನೇ ಬಾರಿಯೂ ಪ್ರಶಸ್ತಿ ಜಯಿಸಲು ವಿಫಲವಾಯಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ 4 ವಿಕೆಟ್‌ಗಳಿಂದ ಕೋಲ್ಕತ ನೈಟ್‌ರೈಡರ್ಸ್‌ಗೆ ಶರಣಾಯಿತು. ಈಗಾಗಲೇ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಐಪಿಎಲ್ ಟ್ರೋಫಿ ಮರೀಚಿಕೆಯಾಗಿಯೇ ಉಳಿಯಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಉತ್ತಮ ಆರಂಭದ ನಡುವೆಯೂ ಸುನೀಲ್ ನಾರಾಯಣ್ (21ಕ್ಕೆ 4) ಸ್ಪಿನ್ ಮೋಡಿಗೆ ದಿಢೀರ್ ಕುಸಿತ 7 ವಿಕೆಟ್‌ಗೆ 138 ರನ್ ಗಳಿಸಿತು. ಸವಾಲಿನ ಮೊತ್ತ ಪೇರಿಸುವ ಯೋಜನೆಯಲ್ಲಿದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಸುನೀಲ್ ನಾರಾಯಣ್ ಹಾಗೂ ಲಾಕಿ ಫರ್ಗ್ಯುಸನ್ (30ಕ್ಕೆ 2) ವಿಲನ್ ಆದರು. ಪ್ರತಿಯಾಗಿ ವೇಗಿಗಳಾದ ಮೊಹಮದ್ ಸಿರಾಜ್ (19ಕ್ಕೆ 2), ಹರ್ಷಲ್ ಪಟೇಲ್ (19ಕ್ಕೆ 2) ಹಾಗೂ ಚಾಹಲ್ (16ಕ್ಕೆ 2) ಮಾರಕ ದಾಳಿ ನಡುವೆಯೂ ಕೆಕೆಆರ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 139 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಆರ್‌ಸಿಬಿ: 7 ವಿಕೆಟ್‌ಗೆ 138 (ದೇವದತ್ ಪಡಿಕಲ್ 21, ವಿರಾಟ್ ಕೊಹ್ಲಿ 39, ಗ್ಲೆನ್ ಮ್ಯಾಕ್ಸ್‌ವೆಲ್ 15, ಲಾಕಿ ಫರ್ಗ್ಯುಸನ್ 30ಕ್ಕೆ 2, ಸುನೀಲ್ ನಾರಾಯಣ್ 21ಕ್ಕೆ 4), ಕೆಕೆಆರ್: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 139 (ಶುಭಮಾನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ಸುನೀಲ್ ನಾರಾಯಣ್ 26, ಮೊಹಮದ್ ಶಮಿ 19ಕ್ಕೆ 2, ಹರ್ಷಲ್ ಪಟೇಲ್ 19ಕ್ಕೆ 2, ಯಜುವೇಂದ್ರ ಚಾಹಲ್ 16ಕ್ಕೆ 2).