ಮಂತ್ರಾಲಯ ಶ್ರೀ ರಾಘವೇಂದ್ರ ರಾಯರ ಮಠದ ಹುಂಡಿಯಲ್ಲಿ 2.11 ಕೋಟಿ ರೂಪಾಯಿಗಳು ಸಂಗ್ರಹ

28-03-Shiva-4
ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಹುಂಡಿಗಳಲ್ಲಿನ ಹಣವನ್ನು ಮಂಗಳವಾರ ಎಣಿಕೆ ಮಾಡಲಾಯಿತು.
Published on

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಹುಂಡಿಗಳಲ್ಲಿನ ಹಣ ಎಣಿಕೆ ಕಾರ್ಯ ಮಂಗಳವಾರ ನಡೆಯಿತು. ಮಾರ್ಚ್‌ನಲ್ಲಿ 2.11 ಕೋಟಿ ರೂ. ಸಂಗ್ರಹವಾಗಿದೆ. 2.07 ಕೋಟಿ ರೂ. ಮೌಲ್ಯದ ನೋಟುಗಳು, 4.56 ಲಕ್ಷ ರೂ. ಮೌಲ್ಯದ ನಾಣ್ಯಗಳು ಹಾಗೂ ಏಳು ಗ್ರಾಂ ಬಂಗಾರ, 571 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. ಕಳೆದ ಎರಡ್ಮೂರು ತಿಂಗಳಿಗೆ ಹೋಲಿಸಿದಲ್ಲಿ ಮಾರ್ಚ್ ತಿಂಗಳಲ್ಲಿ ರಾಯರ ಹುಂಡಿಯಲ್ಲಿ ಕಾಣಿಕೆ ಪ್ರಮಾಣ ಕಡಿಮೆಯಾದೆ. ಈ ಹಿಂದೆ ಮೂರು ಕೋಟಿ ರೂಪಾಯಿವರೆಗೆ ಕಾಣಿಕೆಯನ್ನು ಭಕ್ತರು ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net