ರಾಯರ ಆರಾಧನಾ ಮಹೋತ್ಸವ ಸಂಪನ್ನ

2 anr b y r
ಬಿ.ವೈ.ರಾಘವೇಂದ್ರ ಹೊಸೂರು ಗ್ರಾಮದ ವಾದಿರಾಜಾಶ್ರಮದಲ್ಲಿ ಗುರು ರಾಯರ ದರ್ಶನಾಶೀರ್ವಾದ ಪಡೆದರು.
Published on

ಆಯನೂರು: ಸಮೀಪದ ಹೊಸೂರು ಗ್ರಾಮದ ತಪೋವನ ವಾದಿರಾಜಾಶ್ರಮದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವು ಉತ್ತರಾರಾಧನೆಯೊಂದಿಗೆ ಶನಿವಾರ ಸಂಪನ್ನಗೊಂಡಿತು.

ಸಂಸದ ಬಿ.ವೈ.ರಾಘವೇಂದ್ರ, ಉಪತಹಸೀಲ್ದಾರ್ ಗಣೇಶ್ ರಾಯರ ದರ್ಶನಾಶೀರ್ವಾದ ಪಡೆದರು. ಮೂರು ದಿನವೂ ಜನರು ಭಕ್ತಿಪರವಶರಾಗಿ ರಾಯರ ಆರಾಧನ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಹೊಸೂರು ಗ್ರಾಮದ ಸುಧಾ ವಿಜಯವಿಠಲರಾವ್ ಅವರು ರಂಗೋಲಿಯಲ್ಲಿ ಬಿಡಿಸಿರುವ ರಾಘವೇಂದ್ರ ಮೂರ್ತಿ ನೋಡುಗರ ಗಮನ ಸೆಳೆಯಿತು. ನಾರಾಯಣ ಆಚಾರ್ ಅವರಿಂದ ಪ್ರವಚನ ಹಾಗೂ ಆಯನೂರು ಕೋಟೆಯ ಅಶ್ವಥ್ ನಾರಾಯಣ ಸೇವಾ ಟ್ರಸ್ಟ್‌ನ ಮಹಿಳೆಯರಿಂದ ಗುರು ರಾಘವೇಂದ್ರರ ಕೀರ್ತನಾ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಓಹಿಲೇಶ್ವರಿ ಭಕ್ತಿಗೀತೆಗಳನ್ನು ಹಾಡಿದರು.
ಆಶ್ರಮದ ಆವರಣದಲ್ಲಿ ರಾಯರ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಹರಿವಾಯುಸ್ತುತಿ ಹಾಗೂ ರಾಘವೇಂದ್ರ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಸರ್ವಸೇವೆ, ತೀರ್ಥಪ್ರಸಾದ ಮತ್ತು ಮಹಾಮಂಗಳಾರತಿ ಸಾಂಗವಾಗಿ ನೆರವೇರಿದವು. ರಾಘವೇಂದ್ರ ಸೇವಾ ಸಮಿತಿಯ ಅಧ್ಯಕ್ಷ ಅಚ್ಚುತರಾವ್, ಕಾರ್ಯದರ್ಶಿಗಳು, ಟ್ರಸ್ಟಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net