ಕ್ರೀಡಾಕೂಟ ಆಯೋಜನೆಯಿಂದ ಸಂಸ್ಥೆ ಅಭಿವೃದ್ಧಿ: ರತ್ನವರ್ಮ ಜೈನ್ ಅಭಿಪ್ರಾಯ

kridakoota
Published on

ಬೆಳ್ತಂಗಡಿ: ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಡ್ಲೆ, ಪೆರ್ಲ, ಕೊಕ್ಕಡ ವಲಯಮಟ್ಟದ ಕ್ರೀಡಾಕೂಟ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನವರ್ಮ ಜೈನ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇಂತಹ ಕ್ರೀಡಾಕೂಟದ ಆಯೋಜನೆಯಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ನಿಡ್ಲೆ ವಲಯದ ಸಿ.ಆರ್.ಪಿ ಪ್ರತಿಮಾ ಮಾತನಾಡಿ, ಕ್ರೀಡಾ ಸ್ಫೂರ್ತಿಯಿಂದ ಎಲ್ಲ್ಲ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಹೊರಹಾಕಬೇಕು ಎಂದರು.

ಪ್ರಗತಿಪರ ಕೃಷಿಕ ಚಿತ್ತರಂಜನ್ ಜೈನ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಜಿ.ಶ್ರೀಧರನ್ ನಾಯರ್, ಪುದುವೆಟ್ಟು ಪಂಚಾಯಿತಿ ಅಧ್ಯಕ್ಷೆ ಅನಿತಾ, ಬೊಳ್ಮನಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಂಗನಾಥ ಫಲತ್ತೆರಿ, ವಲಯ ಸಂಘಟಕರಾದ ವಿಲ್‌ಫ್ರೈಡ್ ಪಿಂಟೋ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಟಿಕ್ಕಾ ಸಾಹೇಬ್, ವನದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ಗೌಡ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಸೀನಪ್ಪ ಗೌಡ ಸ್ವಾಗತಿಸಿದರು. ಕ್ರೀಡಾಕೂಟಕ್ಕೆ ವನದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕ್ರೀಡಾಜ್ಯೋತಿ ತರಲಾಯಿತು. ವಿದ್ಯಾರ್ಥಿನಿ ಹರ್ಷಿತಾ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ದೈಹಿಕ ಶಿಕ್ಷಕಿ ಶೀಲಾ ಎನ್. ವಂದಿಸಿದರು. ನಿಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net