More

    ಅಮಿತಾಭ್ ಜತೆ ರಶ್ಮಿಕಾ ಗುಡ್​ಬೈ; ಸೆಟ್ಟೇರಿತು ಬಾಲಿವುಡ್​ನ ಮತ್ತೊಂದು ಸಿನಿಮಾ…

    ಬೆಂಗಳೂರು: ಬಾಲಿವುಡ್ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಬಿಟೌನ್​ನಿಂದ ತೇಲಿಬಂದಿತ್ತು. ಆದರೆ, ಆ ಸಿನಿಮಾ ಬಗ್ಗೆ ಈವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಇದೀಗ ಮುಹೂರ್ತ ಮುಗಿಸಿ ಶೂಟಿಂಗ್​ಗೂ ಚಾಲನೆ ನೀಡಿದೆ ಚಿತ್ರತಂಡ. ಮುಂಬೈನಲ್ಲಿ ಶುಕ್ರವಾರ ಚಿತ್ರದ ಸರಳ ಮುಹೂರ್ತ ಕಾರ್ಯ ನೆರವೇರಿದ್ದು, ಚಿತ್ರಕ್ಕೆ ‘ಗುಡ್​ಬೈ’ ಎಂಬ ಹೆಸರು ಇಡಲಾಗಿದೆ. ಈ ಮೊದಲು ಚಿತ್ರಕ್ಕೆ ‘ಡೆಡ್ಲಿ’ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿತ್ತಾದರೂ, ‘ಗುಡ್​ಬೈ’ ಎಂದು ಮರು ನಾಮಕರಣ ಮಾಡಲಾಗಿದೆ. ಅಪ್ಪ ಮತ್ತು ಮಗಳ ಬಾಂಧವ್ಯದ ಹಿನ್ನೆಲೆಯ ಸಿನಿಮಾ ಇದಾಗಿರಲಿದ್ದು, ನಿವೃತ್ತ ಆರ್ವಿು ಅಧಿಕಾರಿಯ ಪಾತ್ರದಲ್ಲಿ ಅಮಿತಾಭ್ ಕಾಣಿಸಿಕೊಂಡರೆ, ಅವರಿಗೆ ರಶ್ಮಿಕಾ ಮಗಳಾಗಲಿದ್ದಾರೆ.

    ‘ಈ ಸಿನಿಮಾದಲ್ಲಿ ಭಾಗವಹಿಸುವುದಕ್ಕೆ ಕುತೂಹಲಿಯಾಗಿದ್ದೇನೆ. ನನಗೆ ಸಿಕ್ಕ ಮತ್ತೊಂದು ಒಳ್ಳೇ ಪ್ರಾಜೆಕ್ಟ್ ಇದು. ಈ ಚಿತ್ರದ ಭಾಗವಾಗಿದ್ದಕ್ಕೆ ಥ್ರಿಲ್ ಆಗುತ್ತಿದೆ’ ಎಂದು ನಟಿ ರಶ್ಮಿಕಾ ತಮ್ಮ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ‘ಕ್ವೀನ್’, ‘ಸೂಪರ್ 30’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಕಾಸ್ ಬಹ್ಲ್, ‘ಗುಡ್​ಬೈ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೀನಾ ಗುಪ್ತಾ ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿರಲಿದ್ದಾರೆ. ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿ ಫಿಲಂಸ್ ಮತ್ತು ರಿಲಯನ್ಸ್ ಎಂಟರ್​ಟೈನ್​ವೆುಂಟ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಖಾತೆ ತೆರೆದಿರುವ ರಶ್ಮಿಕಾ, ಈಗಾಗಲೇ ಆ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಅದರ ಜತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜತೆಗೆ ‘ಪುಷ್ಪ’ಸಿನಿಮಾ ಸೇರಿ ಇನ್ನೂ ಎರಡ್ಮೂರು ಸಿನಿಮಾಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ. ಇದೀಗ ಆ ಪಟ್ಟಿಗೆ ಹೊಸದಾಗಿ ‘ಗುಡ್​ಬೈ’ ಸೇರಿಕೊಂಡಿದೆ.

    ಮತ್ತೆ ಕೋವಿಡ್ ನಿರ್ಬಂಧ: ಶಾಲೆ, ಜಿಮ್​, ಕ್ಲಬ್, ಪಾರ್ಟಿಹಾಲ್​, ಈಜುಕೊಳ ಬಂದ್​; ಬಾರ್-ರೆಸ್ಟೋರೆಂಟ್​, ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ. 50 ಆಸನ ಭರ್ತಿಗಷ್ಟೇ ಅವಕಾಶ

    ಕಸದ ಗಾಡಿಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಪರಿಣಿತಿ! ಫೋಟೊ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts