ದೀಪಾವಳಿ ಸಂಭ್ರಮದಲ್ಲಿ ರಶ್ಮಿಕಾ: ಶೂಟಿಂಗ್​ಗೆ ರಜೆ ಹಾಕಿ ಮನೆಯಲ್ಲಿ ಹಬ್ಬ ಆಚರಣೆ

Rashmika
Published on

ರಶ್ಮಿಕಾ ಮಂದಣ್ಣ ಸದ್ಯ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ಮುಂಬೈ, ಚೆನ್ನೈ, ಹೈದರಾಬಾದ್ ಅಂತ ಓಡಾಡುತ್ತಿದ್ದಾರೆ. ಸದ್ಯ ಕೆಲವು ದಿನಗಳಿಂದ ಹಿಂದಿ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿರುವ ಕಾರಣ ಮುಂಬೈನಲ್ಲಿರುವ ರಶ್ಮಿಕಾ, ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ರಜೆ ಹಾಕಿದ್ದಾರಂತೆ. ಆ ದಿನ ಹೈದರಾಬಾದ್​ಗೆ ಬಂದು ಕುಟುಂಬದವರ ಜತೆ ದೀಪಾವಳಿ ಆಚರಿಸಿ, ಮತ್ತೆ ಮುಂಬೈಗೆ ಹಿಂತಿರುಗುವುದಾಗಿ ಹೇಳಿಕೊಂಡಿದ್ದಾರೆ.

‘ಸದ್ಯಕ್ಕೆ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಆದರೆ, ಹಬ್ಬದ ದಿನ ನಾನು ಮನೆಗೆ ಹೋಗಲೇಬೇಕೆಂದು ಹೇಳಿ ಸೋಮವಾರ ರಜೆ ತೆಗೆದುಕೊಂಡಿದ್ದೇನೆ. ಹಬ್ಬ ಮುಗಿಸಿಕೊಂಡು ಮತ್ತೆ ಮುಂಬೈಗೆ ಬಂದು ಹಾಡಿನ ಚಿತ್ರೀಕರಣದಲ್ಲಿ ತೊಡಗಲಿದ್ದೇನೆ. ಶೂಟಿಂಗ್ ಪೂರ್ಣವಾದ ಬಳಿಕ ಮತ್ತೆ ಹೈದರಾಬಾದ್​ಗೆ ಹೋಗಿ ಮನೆಯಲ್ಲಿ ಹಬ್ಬದ ಸಿಹಿಯನ್ನು ಸವಿಯಲಿದ್ದೇನೆ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದರೂ ಈಗ ಹೈದರಾಬಾದ್ ನನ್ನ ಮನೆಯಾಗಿದೆ. ಎರಡು ರಾಜ್ಯಗಳ ಸಂಪ್ರದಾಯ, ಸಂಸ್ಕೃತಿ, ಆಚರಣೆಗಳು ಕೊಂಚ ವಿಭಿನ್ನ ಎನಿಸಿದರೂ, ಹಬ್ಬದ ಸಂಭ್ರಮ ಎಲ್ಲೆಡೆ ಒಂದೇ ರೀತಿ ಇರುತ್ತದೆ. ಮನೆಯಲ್ಲಿ ಹಬ್ಬದಂದು ವಿಶೇಷ ಪೂಜೆ ಮಾಡುತ್ತೇವೆ. ಕುಟುಂಬದವರೆಲ್ಲರೂ ಕುಳಿತು ದಿನವಿಡೀ ಹರಟೆ ಹೊಡೆಯುತ್ತೇವೆ’ ಎಂದು ತಮ್ಮ ದೀಪಾವಳಿ ಹಬ್ಬದ ಸಂಭ್ರಮದ ಬಗ್ಗೆ ಹೇಳಿಕೊಂಡಿದ್ದಾರೆ ರಶ್ಮಿಕಾ.

ಅಂದಹಾಗೆ ಧಂತೇರಸ್ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಬಗ್ಗೆಯೂ ಮಾತನಾಡಿರುವ ರಶ್ಮಿಕಾ, ‘ಚಿತ್ರರಂಗಕ್ಕೆ ಬರುವ ಮುಂಚೆಯಿಂದಲೂ ನನಗೊಂದು ಹವ್ಯಾಸವಿದೆ. ಪ್ರತಿ ಹೊಸ ವರ್ಷಕ್ಕೂ ನಾನು ಚಿನ್ನ, ಬೆಳ್ಳಿ ಖರೀದಿಸುತ್ತೇನೆ. ಹಾಗೆಯೇ ಹಬ್ಬದ ದಿನಗಳಲ್ಲಿ, ಮಂಗಳಕರ ದಿನಗಳಂದು ಸಹ ಆಭರಣ ಖರೀದಿಸುತ್ತೇನೆ’ ಎಂದಿದ್ದಾರೆ. ಸದ್ಯ ರಶ್ಮಿಕಾ ತೆಲುಗಿನಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ‘ಪುಷ್ಪ ದಿ ರೂಲ್’, ತಮಿಳಿನಲ್ಲಿ ‘ವಾರಿಸು’, ಹಿಂದಿಯಲ್ಲಿ ರಣಬೀರ್ ಜತೆ ‘ಅನಿಮಲ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.- ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net