ಅಂತದ್ದೇನು ಮಾಡಿದ್ದೀನಿ ಅಂತ ನನಗೇ ಗೊತ್ತಿಲ್ಲ… ಫ್ಯಾನ್ಸ್​ಗಳಿಗೆ ರಶ್ಮಿಕಾ ಕೊಟ್ಟ ಪ್ರತಿಕ್ರಿಯೆ ಇದು!

ವಿಜಯವಾಣಿ - 2024-07-29T110559.948
Published on

ಕೇರಳ: ಪುಷ್ಪ ಚಿತ್ರದ ಮೂಲಕ ನ್ಯಾಷನಲ್​ ಕ್ರಶ್​ ಅದ ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೇ ಡಿಸೆಂಬರ್ 06ಕ್ಕೆ ರಿಲೀಸ್ ಆಗಲು ಸಜ್ಜಾಗಿರುವ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ 'ಪುಷ್ಪ-2' ಚಿತ್ರಕ್ಕೂ ತಾವೇ ನಾಯಕಿಯಾಗಿರುವ ರಶ್ಮಿಕಾ, ಸದ್ಯ ಚಿತ್ರೀಕರಣದ ಕೆಲಸಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರೊಟ್ಟಿಗೆ ತಮಿಳು ನಟ ಧನುಷ್​ ಜತೆಯೂ ಕಾಣಿಸಿಕೊಳ್ಳಲಿರುವ ಸೌತ್ ಬ್ಯೂಟಿ ಇದೀಗ ಸಾಲು ಸಾಲು ಚಿತ್ರಗಳಿಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಪ್ರತಿಬಾರಿ ಒಂದೆರೆಡು ಸಾಲುಗಳ ಬರಹ ಅಥವಾ ಪೋಟೋ ಪೋಸ್ಟ್​ ಮಾಡುವ ಮುಖೇನ ಅಭಿಮಾನಿಗಳಿಗೆ ಆಗಾಗ್ಗೆ ಅಪ್ಡೇಟ್​ ಕೊಡುವ ನಟಿ ಇತ್ತೀಚೆಗಷ್ಟೇ ಕೇರಳದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭೇಟಿ ಕೊಟ್ಟಿದ್ದರು. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹಾಜರಾಗಿದ್ದ ಕಾರ್ಯಕ್ರಮದಲ್ಲಿ ಕಂಗೊಳಿಸಿದ ರಶ್ಮಿಕಾ, ತಮ್ಮ ಫ್ಯಾನ್ಸ್​ ದಂಡನ್ನು ನೋಡಿ ಒಂದು ನಿಮಿಷ ಆಶ್ಚರ್ಯಚಕಿತರಾಗಿದ್ದಾರೆ. ತನಗಾಗಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಎಲ್ಲರಿಗೂ ಮನದಾಳದಿಂದ ಧನ್ಯವಾದ ತಿಳಿಸಿಲು ವಿಶೇಷ ಪೋಸ್ಟ್ ಹಂಚಿಕೊಂಡ 'ನ್ಯಾಷನಲ್ ಕ್ರಶ್', "ಒಂದು ಕಾರ್ಯಕ್ರಮದ ಸಲುವಾಗಿ ಕೇರಳದ ಕರುಣಾಗಪಲ್ಲಿಗೆ ತೆರೆಳಿದ್ದೆ. ತುಂಬ ಚೆನ್ನಾಗಿ ಹಾಗೂ ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ನನಗೆ ಅಲ್ಲಿ ಸೇರಿದ್ದ ಜನಸಾಗರವನ್ನು ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಇಷ್ಟೊಂದು ಪ್ರೀತಿ-ಅಭಿಮಾನ ನಾನು ಖಂಡಿತ ನಿರೀಕ್ಷಿಸಿರಲಿಲ್ಲ" ಎಂದರು.

"ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ನನ್ನ ಸಂಭ್ರಮಿಸಿ, ಕಾಳಜಿ ವಹಿಸುವ ನಿಮಗೆ ಅಂತರಾಳದಿಂದ ಧನ್ಯವಾದ ಹೇಳುವೆ ಎಂದ ರಶ್ಮಿಕಾ, ಇಷ್ಟೊಂದು ಪ್ರಮಾಣದಲ್ಲಿ ಪ್ರೀತಿ ಪಡೆಯುವ ಕೆಲಸ ನಾನೇನು ಮಾಡಿದ್ದೀನಿ ಅಂತ ನನಗೆ ಖಂಡಿತ ಗೊತ್ತಿಲ್ಲ. ಆದ್ರೆ, ಖುಷಿ ತುಂಬಿದೆ. ಸದಾ ನಿಮ್ಮನ್ನು ಪ್ರೀತಿಸುತ್ತಿರುವೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಪ್ರಸ್ತುತ 'ಪುಷ್ಪ 2', 'ರೈನ್​ಬೋ', 'ದಿ ಗರ್ಲ್​ಫ್ರೆಂಡ್'​, 'ಸಿಖಂದರ್'​, 'ಕುಬೇರಾ' ಸೇರಿದಂತೆ ಹಲವು ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net