ಟ್ವಿಟರ್​ನಲ್ಲಿ ಟ್ರೆಂಡ್​ ಆಗ್ತಿದೆ ಹ್ಯಾಪಿ ಬರ್ತಡೇ ರಶ್ಮಿಕಾ ..

raash
Published on

ಬೆಂಗಳೂರು: ರಶ್ಮಿಕಾ ಮಂದಣ್ಣ ಸದ್ಯ ಸೌತ್​ ಇಂಡಸ್ಟ್ರಿಯ ಸೆನ್ಸೆಷನ್​. ಕಿರು ಅವಧಿಯಲ್ಲಿಯೇ ಸ್ಟಾರ್​ಡಮ್​ ಸೃಷ್ಟಿಸಿಕೊಂಡು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ. ಮೂಲ ಕರ್ನಾಟಕದ ಕೊಡಗಿನ ಮೂಲದವರಾದರೂ, ಹೆಚ್ಚು ಖ್ಯಾತಿ ಗಿಟ್ಟಿಸಿಕೊಂಡಿದ್ದು ತೆಲುಗು ನೆಲದಲ್ಲಿ. ಕಿರಿಕ್​ ಪಾರ್ಟಿ ಮೂಲಕ ಎಂಟ್ರಿಯಾಗಿ ಈಗ ದಕ್ಷಿಣ ಭಾರತ ಸಿನಿಮಾ ರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ. ಇವತ್ತು (ಭಾನುವಾರ) ಈ ನಟಿಯ ಜನ್ಮದಿನ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ ಅವರ ಅಭಿಮಾನಿಗಳು.
ಹ್ಯಾಪಿ ಬರ್ತಡೇ ರಶ್ಮಿಕಾ ಹ್ಯಾಷ್​ಟ್ಯಾಗ್​ ಅಡಿಯಲ್ಲಿ ಸರಣಿ ಟ್ವಿಟ್​ಗಳು ಸಂದಾಯವಾಗುತ್ತಿವೆ. ಟ್ವಿಟರ್​​ನಲ್ಲಿ ಕಾಮನ್​ ಡಿಪಿ ಸಹ ಬಿಡುಗಡೆಯಾಗಿದ್ದು, ಫ್ಯಾನ್ಸ್ ಗ್ರೂಪ್​ಗಳಲ್ಲಿ ರಶ್ಮಿಕಾ ಫೋಟೋ ರಾರಾಜಿಸುತ್ತಿವೆ. ಕನ್ನಡದಿಂದ ‘ಪೈಲ್ವಾನ್’ ಕೃಷ್ಣ, ತೆಲುಗಿನಿಂದ ನಿರ್ದೇಶಕ ವೆಂಕಿ ಕುಡುಮುಲ ಮತ್ತು ತಮಿಳಿನಿಂದ ನಿರ್ಮಾಪಕ ಎಸ್.ಆರ್. ಪ್ರಭು ಈ ಸಿಡಿಪಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಮೂಲಕ ಬಿಡುಗಡೆ ಮಾಡಿ ರಶ್ಮಿಕಾಗೆ ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net