ಪ್ರೀತಿಯಿಂದ ರಶ್ಮಿಕಾರನ್ನು ವಿಜಯ್ ದೇವರಕೊಂಡ ಏನೆಂದು ಕರೆಯುತ್ತಾರೆ ಗೊತ್ತಾ? ಅಡ್ಡ ಹೆಸರು ಬಹಿರಂಗ! Rashmika Mandanna

Rashmika Mandanna
Published on

Rashmika Mandanna : ಕಳೆದ ನಾಲ್ಕೈದು ವರ್ಷಗಳಿಂದ ನಟ ವಿಜಯ್​ ದೇವರಕೊಂಡ ಮತ್ತು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಈ ಬಗ್ಗೆ ಪ್ರಶ್ನಿಸಿದಾಗ ವಿಜಯ್​ ಆಗಲಿ, ರಶ್ಮಿಕಾ ಆಗಲಿ ಪ್ರತಿಕ್ರಿಯೆ ನೀಡದೇ ನಿರಾಕರಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಬೆಸ್ಟ್​ ಫ್ರೆಂಡ್ಸ್​ ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಆದರೆ, ಇಬ್ಬರ ನಡುವೆ ಸ್ನೇಹದಿಂದಾಚೆಗೆ ಇನ್ನೊಂದು ಸಂಬಂಧ ಇರುವ ಸುಳಿವನ್ನು ಆಗಾಗ ಅವರೇ ನೀಡುತ್ತಿರುತ್ತಾರೆ.

ಇಬ್ಬರು ವಿದೇಶ ಪ್ರವಾಸ ಮಾಡುವುದು, ಹೋಟೆಲ್​ನಲ್ಲಿ ಒಟ್ಟಿಗೆ ಭೋಜನ ಸವಿಯುವುದು ಹಾಗೂ ವಿಜಯ್​ ದೇವರಕೊಂಡ ಮನೆಗೆ ಭೇಟಿ ನೀಡುವುದು ಹೀಗೆ ಅನೇಕ ಕ್ಷಣಗಳು ವರದಿಯಾಗಿವೆ. ಇದನ್ನು ನೋಡಿದರೆ, ಇಬ್ಬರ ನಡುವೆ ಪ್ರೇಮ ಸಂಬಂಧ ಇರುವುದು ಗೊತ್ತಾಗುತ್ತದೆ. ಅಲ್ಲದೆ, ಪರೋಕ್ಷವಾಗಿ ಇಬ್ಬರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಇದೀಗ ಮತ್ತೊಮ್ಮೆ ರಶ್ಮಿಕಾ-ವಿಜಯ್​ ಹೆಸರು ಮುಂಚೂಣಿಗೆ ಬಂದಿದೆ. ಇತ್ತೀಚೆಗಷ್ಟೇ ರಶ್ಮಿಕಾ ಅವರು ವಿಜಯ್ ಅವರೊಂದಿಗೆ ನಟಿಸಿದ ಡಿಯರ್ ಕಾಮ್ರೇಡ್ ಚಿತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಇಬ್ಬರ ನಡುವಿನ ಡೇಟಿಂಗ್ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೀಗ ವಿಜಯ್ ದೇವರಕೊಂಡ ಅವರ 'ಕಿಂಗ್‌ಡಮ್' ಸಿನಿಮಾ ಬಗ್ಗೆ ರಶ್ಮಿಕಾ ಮಾಡಿದ ಟ್ವೀಟ್ ವೈರಲ್ ಆಗಿದೆ.

ವಿಜಯ್ ದೇವರಕೊಂಡ 'ಕಿಂಗ್‌ಡಮ್' ಚಿತ್ರದ ಟ್ರೇಲರ್ ಅನ್ನು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ಈ ತಿಂಗಳ 31ಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ. ಆ ದಿನ ವಿಜಯ್ ದೇವರಕೊಂಡ ಅವರ 'ಫೈರ್​' ಅನ್ನು ನೋಡಲು ಬಯಸುತ್ತೇನೆ. ಗೌತಮ್ ತಿನ್ನನುರಿ, ಅನಿರುದ್ಧ್ ಮತ್ತು ವಿಜಯ್ ದೇವರಕೊಂಡ ಸೇರಿದಂತೆ ಮೂವರು ಪ್ರತಿಭೆಗಳು ಒಟ್ಟಾಗಿ ರಚಿಸಿದ ಚಿತ್ರಕ್ಕಾಗಿ ತಾವು ಕಾತರದಿಂದ ಕಾಯುತ್ತಿರುವುದಾಗಿ ಅವರು ಪೋಸ್ಟ್ ಮಾಡಿದ್ದಾರೆ.

ರಶ್ಮಿಕಾ ಟ್ವೀಟ್​ ಗಮನಿಸಿರುವ ವಿಜಯ್ ದೇವರಕೊಂಡ, ಕ್ಯೂಟ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ರಶೀಲು ( Rushhielu) ಎಂದು ಬರೆದು, ಹೆಸರಿನ ಮುಂದೆ ಹೃದಯದ ಸಿಂಬಲ್​ ಅನ್ನು ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ಕಿಂಗ್​ಡಮ್​ ಅನ್ನು ಆನಂದಿಸಿ ಎಂದು ಬರೆದಿದ್ದಾರೆ. ಈ ಟ್ವೀಟ್​ ವೈರಲ್​ ಆಗಿದ್ದು, ವಿಜಯ್​ ಅವರು ರಶ್ಮಿಕಾ ಅವರ ಅಡ್ಡ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ.

ರಶ್ಮಿಕಾ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಚಷ್ಮಾ ಸುಂದರಿ ರಶ್ಮಿಕಾ ಮಂದಣ್ಣ, ಪುಷ್ಪ - 2 ಚಿತ್ರದ ಮೂಲಕ ಬ್ಲಾಕ್​ಬಸ್ಟರ್​ ಗಳಿಸಿದರು. ಇದರ ಬೆನ್ನಲ್ಲೇ ಚಾವಾ ಚಿತ್ರದ ಮೂಲಕ ಮತ್ತೊಂದು ಹಿಟ್​ ಪಡೆದರು. ಸದ್ಯ ರಶ್ಮಿಕಾ ಸರಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ಅವರು ಕುಬೇರ ಚಿತ್ರದ ಮೂಲಕ ಮತ್ತೊಂದು ಹಿಟ್ ಗಳಿಸಿದ್ದಾರೆ. ಶೀಘ್ರದಲ್ಲೇ, ಅವರ 'ದಿ ಗರ್ಲ್ ಫ್ರೆಂಡ್' ಚಿತ್ರ ಥಿಯೇಟರ್‌ಗಳಿಗೆ ಬರಲಿದೆ. ಅದರ ನಂತರ, ಅವರು ಮಹಿಳಾ ಆಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net