More

    ಹೊಸ ಚಿತ್ರದಲ್ಲಿ ನಾನಿಗೆ ಹೀರೋಯಿನ್​ ಆಗ್ತಾರಾ ರಶ್ಮಿಕಾ?

    ಹೈದರಾಬಾದ್​: ಈಗಾಗಲೇ ಮಹೇಶ್​ ಬಾಬು, ಅಲ್ಲು ಅರ್ಜುನ್​ರಂತಹ ಸ್ಟಾರ್​ಗಳ ಜತೆಗೆ ನಟಿಸಿರುವ ರಶ್ಮಿಕಾ, ಇದೀಗ ‘ಆಚಾರ್ಯ’ ಚಿತ್ರದಲ್ಲಿ ರಾಮ್​ಚರಣ್​ ತೇಜ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಇದೆ. ಅದರ ಜತೆಗೆ ನಾಗಾರ್ಜುನ ಅವರ ಎರಡನೆಯ ಮಗ ಅಖಿಲ್​ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಮಧ್ಯೆಯೇ, ರಶ್ಮಿಕಾ ಹೆಸರು ಇನ್ನೊಂದು ಹೊಸ ಚಿತ್ರದಲ್ಲಿ ಕೇಳಿಬರುತ್ತಿದೆ. ಈ ಬಾರಿ ಅವರು ನಾನಿ ಅಭಿನಯದ ‘ಶ್ಯಾಮ್​ ಸಿಂಗ್​ ರಾವ್​’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ವಿಷಯವೊಂದು ಹೆಚ್ಚುಹೆಚ್ಚು ಕೇಳಿ ಬರುತ್ತಿದೆ.

    ಇದನ್ನೂ ಓದಿ: ಅಜಿತ್​ ಬರದಿದ್ದರೆ ಏನಾಯ್ತು? ಕಾಲೆಳೆದವರಿಗೆ ಚರಣ್​ ಪ್ರಶ್ನೆ

    ಈ ಚಿತ್ರದಲ್ಲಿ ನಾಣಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ವಿ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಾನಿಗೆ ಟಾಲಿವುಡ್​ನಿಂದ ಸಿಕ್ಕಾಪಟ್ಟೆ ಆಫರ್​ಗಳು ಬರುತ್ತಿವೆಯಂತೆ. ಈ ಪೈಕಿ ‘ಶ್ಯಾಮ್​ ಸಿಂಗ್​ ರಾವ್​’ ಚಿತ್ರವನ್ನು ನಾನಿ, ಲಾಕ್​ಡೌನ್​ಗೂ ಮುನ್ನವೇ ಒಪ್ಪಿಕೊಂಡಿದ್ದರು. ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರ ನಿಂತಿದೆ.

    ಇದೀಗ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗಿದ್ದು, ಅಕ್ಟೋಬರ್​ನಿಂದ ಚಿತ್ರೀಕರಣ ಶುರು ಮಾಡುವುದಕ್ಕೆ ನಾನಿ ಉತ್ಸುಕರಾಗಿದ್ದಾರಂತೆ. ಮೊದಲ ಹಂತವಾಗಿ ಅವರು ‘ಶ್ಯಾಮ್​ ಸಿಂಗ್ ರಾವ್​’ಗೆ ಡೇಟ್ಸ್​ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಕಂಗನಾ ಬೆಂಬಲಿಸಿದ್ದಕ್ಕೆ ಅಕ್ಕಪಕ್ಕದ ಮನೆ ಮಂದಿಗೂ ನೋಟಿಸ್​; ಮನೆ ನೆಲಸಮ ಉಲ್ಲೇಖ!

    ಈಗಾಗಲೇ ಚಿತ್ರಕ್ಕೆ ಸಾಯಿಪಲ್ಲವಿ ಒಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಾಗಿದೆ. ಚಿತ್ರದಲ್ಲಿ ಇನ್ನೂ ಒಬ್ಬ ನಾಯಕಿ ಇದ್ದು, ಆ ಪಾತ್ರಕ್ಕೆ ರಶ್ಮಿಕಾ ಅವರನ್ನು ಚಿತ್ರತಂಡದವರು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಕಡೆ ರಶ್ಮಿಕಾ ಅವರಿಂದ ಅಧಿಕೃತ ಗ್ರೀನ್​ ಸಿಗ್ನಲ್​ ಸಿಕ್ಕಿಲ್ಲ.

    ಏಕೆಂದರೆ, ರಶ್ಮಿಕಾ ಸಹ ಒಂದೆರೆಡು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಮೊದಲು ಆ ಚಿತ್ರಕ್ಕೆ ಡೇಟ್​ಗಳನ್ನು ಕೊಡುತ್ತಾರಂತೆ.
    ನಾನಿ ಅಭಿನಯದ ‘ಶ್ಯಾಮ್​ ಸಿಂಗ್ ರಾವ್’ ಚಿತ್ರದಲ್ಲಿ ನಟಿಸುತ್ತಿದ್ದಾರಾ, ಇಲ್ಲವಾ? ವೇಯ್ಟ್​ ಅಂಡ್​ ಸೀ …

    ಇನ್ನು ಪೋಸ್ಟ್​ಪೋನ್​ ಮಾಡುವಂತಿಲ್ಲ … ರಾಜಮೌಳಿಗೆ ಅಭಿಮಾನಿಗಳ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts