More

    ಕಂಗನಾ ಬೆಂಬಲಿಸಿದ್ದಕ್ಕೆ ಅಕ್ಕಪಕ್ಕದ ಮನೆ ಮಂದಿಗೂ ನೋಟಿಸ್​; ಮನೆ ನೆಲಸಮ ಉಲ್ಲೇಖ!

    ಮುಂಬೈ: ಬಾಲಿವುಡ್ ನಟಿ ಕಂಗನಾ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಮುಸುಕಿನ ಜಗಳ ತಾರಕ್ಕೇರಿದೆ. ಅದರ ಪರಿಣಾಮ ಈಗಾಗಲೇ ಕಂಗನಾ ಕಚೇರಿ ಸೇರಿ ಮನೆಯನ್ನು ಮುಂಬೈ ಪಾಲಿಕೆ ಒಡೆದು ಹಾಕಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಎಂಸಿ, ಕಂಗನಾ ಮನೆ ಪಕ್ಕದವರಿಗೂ ನೋಟಿಸ್​ ನೀಡಿದೆ!

    ಇದನ್ನೂ ಓದಿ: ಏಳು ದಿನಗಳಲ್ಲಿ ಅನುರಾಗ್ ಬಂಧನವಾಗದಿದ್ದರೆ ಪ್ರತಿಭಟನೆ … ಅಠಾವಳೆ ಎಚ್ಚರಿಕೆ

    ಹೌದು, ಸ್ವತಃ ಈ ವಿಚಾರವನ್ನು ಟ್ವಿಟ್​ ಮಾಡಿಕೊಂಡಿರುವ ಕಂಗನಾ, ‘ಇಂದು ನಮ್ಮ ಮನೆಯ ಅಕ್ಕಪಕ್ಕದವರಿಗೆ ಬಿಎಂಸಿ ನೋಟಿಸ್​ ನೀಡಿದೆ. ನನ್ನನ್ನು ಬೆಂಬಲಿಸಿದ್ದಕ್ಕೆ ಅವರನ್ನು ಹೆದರಿಸುತ್ತಿದೆ. ಒಂದು ವೇಳೆ ನನ್ನನ್ನು ಬೆಂಬಲಿಸಿದರೆ, ನಿಮ್ಮ ಮನೆಗಳನ್ನೂ ಕೆಡವುದಾಗಿ ಬೆದರಿಕೆ ಹಾಕಿದೆ. ನನ್ನ ಮನೆ ಅಕ್ಕಪಕ್ಕದವರ್ಯಾರೂ ಮಹಾರಾಷ್ಟ್ರ ಸರ್ಕಾರದ ಬಗ್ಗೆ ತುಚ್ಯವಾಗಿ ಮಾತನಾಡಿಲ್ಲ. ಹಾಗಾಗಿ ಅವರ ಮನೆಗಳಿಗೆ ಏನೂ ಮಾಡಬೇಡಿ’ ಎಂದು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.

    ಇತ್ತ ಮಹಾ ಸರ್ಕಾರದ ಕಾರ್ಯವೈಖರಿ ಖಂಡಿಸಿರುವ ಕಂಗನಾ, ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಹರಿಯಾಣದ ಯೂಟ್ಯೂಬರ್​ ಸಾಹಿಲ್ ಚೌಧರಿಯವರ ಬಂಧನವನ್ನು ಖಂಡಿಸಿ ಕಂಗನಾ ಮಾತನಾಡಿದ್ದರು.

    ಇದನ್ನೂ ಓದಿ: ಜಗತ್ತಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು ಎಂದು ಹೇಳಿದ ಕಂಗನಾ ರಣಾವತ್​

    ಸಾಹಿಲ್​ ಚೌಧರಿಯವರು ತಮ್ಮ ಯೂಟ್ಯೂಬ್ ಮೂಲಕ ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಾದ ಮೇಲೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಸಾಹಿಲ್​ರನ್ನು ಬಂಧಿಸಿದ ಮುಂಬೈ ಪೊಲೀಸರ ಕ್ರಮವನ್ನು ಖಂಡಿಸಿ ಟ್ವೀಟ್​ ಮಾಡಿದ ಕಂಗನಾ ರಣಾವತ್​, ಮುಂಬೈ ಒಂದು ಗೂಂಡಾ ನಗರವಾಗಿದೆ. ಇಲ್ಲಿ ಗೂಂಡಾಗಳ ಆಡಳಿತ ನಡೆಯುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯವರಂತೂ ಜಗತ್ತಿನಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದ್ದರು. (ಏಜೆನ್ಸೀಸ್​)

    ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts