More

    ಮನೆ ಧ್ವಂಸ, ಏಳು ಜನರ ವಿರುದ್ಧ ಕೇಸ್

    ಜೆಸಿಬಿ ಯಂತ್ರಗಳಿಂದ ವಾಸದ ಮನೆ ನೆಲಸಮ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ

    ಕನಕಪುರ: ನಗರದ ಕೋಟೆಯಲ್ಲಿನ ವಾಸದ ಮನೆಯೊಂದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಬಂಧಿಗಳು ಮತ್ತವರ ಬೆಂಬಲಿಗರದಿಂದ ಅಕ್ರಮವಾಗಿ ಜೆಸಿಬಿ ಯಂತ್ರಗಳಿಂದ ಧ್ವಂಸಗೊಳಿಸಿ, ಕುಟುಂಬಸ್ಥರನ್ನು ಬೀದಿಪಾಲು ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


    ಕನಕಪುರ ನಗರದ ಕೋಟೆ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಗೋವಿಂದಮ್ಮ ಮತ್ತು ಪತಿ ವೆಂಕಟೇಶ್ ದಂಪತಿಗಳು ವಾಸವಿದ್ದು, ಮನೆಗೆ ಯಾವುದೇ ನೋಟಿಸ್, ಕಾರಣ ನೀಡದೆ ಏಕಾಏಕಿ ಡಿ.ಕೆ. ಶಿವಕುಮಾರ್ ಅವರ ಸೋದರ ಮಾವನ ಮಕ್ಕಳಾದ ಮಳಗಾಳು ಎಂ.ಮಂಜುನಾಥ್, ಅವರ ಸಹೋದರ ಸಂಪತ್ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರ, ಪ್ರೇಮಲೀಲಾ, ಹನುಮನಹಳ್ಳಿಯ ವೆಂಕಟಪ್ಪ ಕೆರಳಾಳುಸಂದ್ರದ ಗಿರಿ ಹಾಗೂ ವಿವೇಕಾನಂದನಗರದ ಮಂಜು ಅರಸ್ ಎಂಬುವವರು ವಿರುದ್ಧ ಐಪಿಸಿ ಸೆಕ್ಷನ್ 143, 147, 148, 307, 323, 324, 354, 379, 447, 448, 506 ಹಾಗೂ ರೆಡ್‌ವಿತ್ 149 ಅಡಿಯಲ್ಲಿ ಪ್ರರಕಣ ದಾಖಲಿಸಿ, ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದ್ದು, ಅದರನ್ವಯ ಏ.29 ರಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಘಟನೆ ವಿವರ
    ನಗರದ ಕೋಟೆ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಶ್ರೀ ರಾಮಮಂದಿರದ ಮುಂಭಾಗದಲ್ಲಿ ಕಳೆದ 35 ವರ್ಷಗಳಿಂದ ವಾಸವಿರುವ ನಮಗೆ 1988ರಲ್ಲಿ ಹನುಮನಹಳ್ಳಿ ಅಲುಮೇಲಮ್ಮ ಅವರಿಂದ ಈ ಮನೆಯಲ್ಲಿ ರಾಘವೇಂದ್ರ ಶಾಲೆಯನ್ನು ನಡೆಸಲು ಬಾಡಿಗೆಗೆ ಪಡೆಲಾಗಿತ್ತು. ನಂತರ ಮನೆಯ ಮಾಲೀಕರು ಖರೀದಿ ವಿಚಾರದಲ್ಲಿ ನಮಗೆ ಮನೆ ನೀಡುವಂತೆ ಅಗ್ರಿಮೆಂಟ್ ಮಾಡಲಾಗಿತ್ತು. ನಂತರ 1992ರಲ್ಲಿ ಮಾಲೀಕರ ಮಕ್ಕಳಾದ ಪ್ರೇಮಲೀಲಾ ಹಲವರು ಈ ಹಣಕ್ಕೆ ಮನೆ ನೀಡುವುದಿಲ್ಲವೆಂದು ಪಂಚಾಯಿತಿ ನಡೆಸಿ ಪುನಃ ಹೊಸ ಅಗ್ರಿಮೆಂಟ್ ಮಾಡಿದ್ದು, ಮಾಲೀಕರಾದ ಅಲುಮೇಲಮ್ಮ ನಿಧನದ ನಂತರ ಇವರ ಮಕ್ಕಳು ಅಗ್ರಿಮೆಂಟ್ ಪ್ರಕಾರ ರಿಜಿಸ್ಟರ್ ಮಾಡಿಕೊಡಲು ಕಾಲಹರಣ ಮಾಡಿದ್ದರು.

    ಅಧಿಕಾರಿಗಳಿಗೆ ಕೋರ್ಟ್ ಆದೇಶ
    ಫೆ.15ರಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆ ಬಳಿ ಬಂದ 25ಕ್ಕೂ ಹೆಚ್ಚು ಮಂದಿ ವೆಂಕಟೇಶ್ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ ನನ್ನ ಕತ್ತಿನಲ್ಲಿದ ಮಾಂಗಲ್ಯ ಸರ ಕಿತ್ತು ಎರಡು ಜೆಸಿಬಿ ಯಂತ್ರಗಳಿಂದ ಮನೆಯಲ್ಲಿದ್ದ ವಸ್ತುಗಳನ್ನು ಬೀದಿಗೆ ಬಿಸಾಕಿ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಲು ಬಿಡದೆ ಮನೆಯನ್ನು ನೆಲಸಮ ಮಾಡಿದ್ದರು. ಈ ಸಂಬಂಧ ಇತ್ತೀಚೆಗೆ ದಂಪತಿಗಳಿಬ್ಬರು ಸುದ್ದಿಗೋಷ್ಠಿ ನಡೆಸಿ, ನಂತರ ಠಾಣೆಗೆ ದೂರು ಕೊಡಲು ಹೋದಾಗ ವೆಂಕಟೇಶ್ ಅವರನ್ನು ಪೊಲೀಸರು, ಠಾಣೆಯಲ್ಲಿ ಕೂರಿಸಿ ಮನೆ ಧ್ವಂಸವಾದ ಬಳಿಕ ಕಳಿಸಿದ್ದರು. ಸ್ಥಳೀಯ ಪೊಲೀಸರು ನಮಗೆ ರಕ್ಷಣೆ ನೀಡದೇ ಸ್ಪಂದಿಸದ ಕಾರಣ ಜಿಲ್ಲಾ ಮತ್ತು ರಾಜ್ಯಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ಮನವಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ರಕ್ಷಣೆ ನೀಡಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಅದರಂತೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ವರದಿ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸುರೇಶ್ ಅಣ್ಣಪ್ಪ ಸವದಿ ಆದೇಶ ನೀಡಿದ್ದರು. ಇದರನ್ವಯ ನಗರ ಠಾಣೆಯಲ್ಲಿ ಏಳು ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts