More

    ಇನ್ನು ಪೋಸ್ಟ್​ಪೋನ್​ ಮಾಡುವಂತಿಲ್ಲ … ರಾಜಮೌಳಿಗೆ ಅಭಿಮಾನಿಗಳ ಎಚ್ಚರಿಕೆ

    ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಬಹುಶಃ ‘ಆರ್​ಆರ್​ಆರ್​’ ಎಂಬ ಚಿತ್ರದ ಬಗ್ಗೆ ಚರ್ಚೆ ನಡೆದಷ್ಟು ಬೇರೆ ಯಾವ ಚಿತ್ರದ ಬಗ್ಗೆಯೂ ನಡೆದಿರಲಿಕ್ಕಿಲ್ಲ. ಅದಕ್ಕೆ ಕಾರಣವೂ ಇದೆ. ಮೊದಲಿಗೆ ಇದು ರಾಜಮೌಳಿ ನಿರ್ದೇಶನದ ಚಿತ್ರ. ಎರಡನೆಯದಾಗಿ ಟಾಲಿವುಡ್​ನ ಟಾಪ್​ ಹೀರೋಗಳಾದ ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಬಗ್ಗೆ ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಇದೆ.

    ಆದರೆ, ಚಿತ್ರ ಈಗಾಗಲೇ ಸಾಕಷ್ಟು ತಡವಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 2021ರ ಸಂಕ್ರಾಂತಿಗೆ ಚಿತ್ರ ಬಿಡುಗಡೆ ಎಂದು ಫೈನಲ್​ ಆಗಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ ಕಾರಣದಿಂದಾಗಿ ಚಿತ್ರ ಒಂದಿಷ್ಟು ತಡವಾಯಿತು. ಕೊನೆಗೆ ಚಿತ್ರವನ್ನು ಮುಂದಿನ ವರ್ಷದ 30ಕ್ಕೆ ಬಿಡುಗಡೆ ಮಾಡಬೇಕು ಎಂದು ಯೋಚಿಸಲಾಯಿತು. ಆದರೆ, ಇನ್ನೂ ಚಿತ್ರೀಕರಣ ಶುರುವಾಗಿಲ್ಲ. ಹಾಗಾಗಿ ಚಿತ್ರವೇನಿದ್ದರೂ 2022ರ ಸಂಕ್ರಾಂತಿಗೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಕಂಗನಾ ಬೆಂಬಲಿಸಿದ್ದಕ್ಕೆ ಅಕ್ಕಪಕ್ಕದ ಮನೆ ಮಂದಿಗೂ ನೋಟಿಸ್​; ಮನೆ ನೆಲಸಮ ಉಲ್ಲೇಖ!

    ಆದರೆ, ಹೇಗಾದರೂ ಮಾಡಿ, ಏನಾದರೂ ಮಾಡಿ, ಚಿತ್ರವನ್ನು ಮುಂದಿನ ವರ್ಷದ ಜುಲೈ ಕೊನೆಗೆ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ರಾಜಮೌಳಿಗೆ ಹೇಳುತ್ತಿದ್ದಾರಂತೆ. ಇದನ್ನು ಒತ್ತಡ ಅಂತ ಬೇಕಾದರೂ ಹೇಳಿ ಅಥವಾ ಎಚ್ಚರಿಗೆ ಎಂದಾದರೂ ಹೇಳಿ. ಒಟ್ಟಾರೆ, ಚಿತ್ರ ಈಗಾಗಲೇ ಸಾಕಷ್ಟು ತಡವಾಗಿದ್ದು ಇನ್ನು ತಡ ಮಾಡಬೇಡಿ ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ.

    ಅದಕ್ಕೆ ಸರಿಯಾಗಿ, ಚಿತ್ರವನ್ನು ಜನವರಿ ಹೊತ್ತಿಗೆ ಮುಗಿಸಿ, ಆ ನಂತರ ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳೆಲ್ಲಾ ಮುಗಿಸಿದರೂ, ಚಿತ್ರ ಬಿಡುಗಡೆಗೆ ಐದು ತಿಂಗಳಿರುತ್ತವೆ, ಈ ಐದು ತಿಂಗಳಲ್ಲಿ ಹೇಗಾದರೂ ಚಿತ್ರವನ್ನು ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ರಾಜಮೌಳಿ ಅವರನ್ನು ಒತ್ತಾಯ ಮಾಡುತ್ತಿದ್ದಾರಂತೆ.

    ಇದನ್ನೂ ಓದಿ: ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ?

    ಆದರೆ, ರಾಜಮೌಳಿ ಮಾತ್ರ ಗುಣಮಟ್ಟದಲ್ಲಿ ಯಾವತ್ತೂ ರಾಜಿಯಾಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ತಮ್ಮ ಮನಸ್ಸಿಗೆ ತೃಪ್ತಿಯಾಗದೆ, ಹಾಗೆಲ್ಲಾ ಅರ್ಜೆಂಟ್​ ಆಗಿ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂಬುದು ಸಹ ಗೊತ್ತಿರುವ ವಿಚಾರವೇ.

    ಆದರೂ ಅಭಿಮಾನಿಗಳು ಒಂದು ಪ್ರಯತ್ನ ಮಾಡೋಣ ಅಂತ ಮುಂದಾಗಿದ್ದಾರೆ. ಮುಂದಿನ ವರ್ಷ ಜುಲೈ 30ಕ್ಕೆ ಚಿತ್ರ ಬಿಡುಗಡೆ ಮಾಡಿ ಎಂಬ ಅಭಿಯಾನವನ್ನು ಸೋಷಿಯಲ್​ ಮೀಡಿಯಾದಲ್ಲಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಇದನ್ನು ರಾಜಮೌಳಿ ಅವರಿಗೆ ಟ್ಯಾಗ್​ ಮಾಡುತ್ತಿದ್ದಾರಂತೆ.

    ಅಭಿಮಾನಿಗಳ ಈ ಮನವಿಗೆ ರಾಜಮೌಳಿ ಮಣಿಯುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

    ಅಜಿತ್​ ಬರದಿದ್ದರೆ ಏನಾಯ್ತು? ಕಾಲೆಳೆದವರಿಗೆ ಚರಣ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts