

ಉಡುಪಿ: ಭಾರತವನ್ನು ಭಾಷೆ ಮತ್ತು ಜಾತಿ ಅಧಾರದಲ್ಲಿ ಒಡೆದು ದೀರ್ಕಾಲದಲ್ಲಿ ಪರಿಣಾಮ ಬೀರುವ ಕಾರ್ಯಸಾಧನೆಗೆ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿದ್ದು, ಇವುಗಳನ್ನು ಮೆಟ್ಟಿ ನಿಲ್ಲುವುದು ಹಿಂದೂ ಸಮಾಜಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಸೈನ್ಯ ಶಕ್ತಿ ಬಳಸಿ ಹಿಂದೂಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಲಿಸದೇ ಇದ್ದಾಗ ಹಿಂದೂ ಅಸ್ಮತೆಯ ಮೇಲೆ ಪ್ರಹಾರಗಳು ಪ್ರಾರಂಭವಾಗಿವೆ ಎಂದು ಅಕ್ಸ್ರ್ಡ್ ವಿವಿ ವಿದ್ಯಾರ್ಥಿ ಸಂಘ ಮಾಜಿ ಅಧ್ಯಕ್ಷೆ ರಶ್ಮಿ ಸಮಂತ್ ಹೇಳಿದರು.
ಬುಧವಾರ ಮಂಥನ ಚಿಂತನ ಮತ್ತು ವೈಚಾರಿಕ ವೇದಿಕೆ ಅಶ್ರಯದಲ್ಲಿ ಆರೆಸ್ಸೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಎ ಹಿಂದೂ ಇನ್ ಆಕ್ಸ್ರ್ಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
10ನೇ ಶತಮಾನದವರೆಗೂ ವಿಶ್ವದಲ್ಲಿ ಭಾರತದ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳಿದ್ದವು. ಪ್ರಾಚಿನ ಲುಗಾದ್ ಎಂಬ ಪರ್ಶಿಯನ್ ನಿಂಟಿನಲ್ಲಿ ಹಿಂದೂ ಶಬ್ಧಕ್ಕೆ ಸುಂದರ ಹೆಣ್ಮಗುವಿನ ಮುಖದಲ್ಲಿರುವ ಕಪು$್ಪ ಬೊಟ್ಟು ಎಂದು ವರ್ಣಿಸಲಾಗಿದೆ. ನಂತರ ಹಿಂದುಗಳನ್ನು ಮಾನಸಿಕವಾಗಿ ಕುಗ್ಗಿಸುವ ಮೊದಲ ಪ್ರಯತ್ನವಾಗಿ ಹಿಂದೂ ಶಬ್ಧಕ್ಕೆ ಅಪಾರ್ಥಗಳನ್ನು ಬರೆಯಲಾಯಿತು. ಹಿಂದೂ ಶಬ್ಧಕ್ಕೆ ಚೋರ್, ಕಾಫೀರ್ ಎಂಬ ಆರ್ಥವನ್ನು ಸೇರಿಸಲಾಯಿತು. ಇದು ಮೊದಲ ಬೌದ್ಧಿಕ ದಾಳಿ. ಜಾಗತಿಕ ಮಾದ್ಯಮಗಳೂ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ಅವಲೋಕಿಸುವುದಿಲ್ಲ. ಅನ್ಯ ಸಮುದಾಯಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತವೆ ಎಂದು ಹೇಳಿದರು.
ಆಕ್ಸರ್ಡ್ ದಿನಗಳು
ಆಕ್ಸ್ರ್ಡ ವಿವಿಯ ಅನೇಕ ಶತಮಾನ ಇತಿಹಾಸದಲ್ಲಿ ಭಾರತೀಯರೊಬ್ಬರು ವಿದ್ಯಾರ್ಥಿ ಸಂದ ಅಧ್ಯಕ್ಷ ಪದವಿಗೆ ಏರಿಲ್ಲ. ಇದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೆ. 1000 ಮತಗಳ ಅಂತರದಿಂದ ಗೆಲವೂ ಲಭಿಸಿತ್ತು. ಚುನಾವಣೆಯಲ್ಲಿ ಶೇ. 54ರಷ್ಟು ಮತಗಳು ನನ್ನ ಪರವಾಗಿದ್ದವು. ಅದರೆ ವಿವಿಯಲ್ಲಿದ್ದ ಎಡಪಂಥೀಯರು ತಮ್ಮ ಗಂಜಿಕೇಂದ್ರ ಬಂದ್ ಆಗುವ ಭೀತಿಯಿಂದ ಇಲ್ಲಸಲ್ಲದ ಕಥೆಗಳನ್ನು ಕಟ್ಟಿ ರಾಜೀನಾಮೆ ಸಲ್ಲಿಸುವಂತೆ ಮಾಡಿದರು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರೊೆಸರ್ ಒಬ್ಬರನ್ನು ವಿವಿಯಿಂದ ಇತ್ತೀಚೆಗೆ ಅಮಾನತುಗೊಳಿಸಲಾಗಿದೆ. ಬಹುಸಂಖ್ಯಾತ ವಿದ್ಯಾರ್ಥಿಗಳು ಮೌನ ವಹಿಸಿದ್ದರಿಂದ ಶೇ. 5ರಷ್ಟು ಇದ್ದ ವಿರೋಧಿಗಳ ಧ್ವನಿಗೆ ಬಲ ಲಭಿಸಿತ್ತು ಎಂದರು.
ಪುಸ್ತಕದ ಬಗ್ಗೆ ಅವಲೋಕನ ನೀಡಿದ ಎಂಐಟಿ ಪ್ರಾಧ್ಯಾಪಕ ನಂದನ್ ಪ್ರಭು, ಅಮೇರಿಕಾ ಮತ್ತು ಯುರೋಪಿಯನ್ ದೇಶಗಳು ಅರ್ಥಿಕ ದೃಷ್ಟಿಯಿಂದ ಮಾತ್ರ ಕ್ಯಾಪಿಟಲಿಸಂ ಹೊಂದಿರುವ ದೇಶಗಳು. ಅಂತರಿಕಾ ದೃಷ್ಟಿಯಿಂದ ಸಾಂಸತಿಕ ಮಾರ್ಕಸಿಸ್ಟ್ ಕೋಟೆಯೊಳಗೆ ಭದ್ರವಾಗಿವೆ. ಭಾರತವನ್ನು ವಿಭಜಿಸಲು ಭೌದ್ಧಿಕ ಎಡಪಂಥೀಯರು ಇಸ್ಲಾಂ ಮತ್ತು ಕೆಸ್ತ ಶಕ್ತಿಗಳನ್ನು ಅವಲಂಬಿಸಿವೆ. ಅಹಿಂದ ಎಂಬ ಪರಿಕಲ್ಪನೆಗೆ ಮೂಲ ಚೌಕಟ್ಟು ನೀಡಿದವರು ಇದೇ ಸಾಂಸತಿಕ ವರ್ಕ್ಸಿಸ್ಟರು ಎಂದು ಹೇಳಿದರು. ರಶ್ಮಿ ಸಮಂತ್ ಅವರ ಎ ಹಿಂದೂ ಇನ್ ಆಕ್ಸ್ರ್ಡ್ ಕೃತಿಯನ್ನು ಅರೆಸ್ಸೆಸ್ ಹಿರಿಯ ಪ್ರಚಾರಕ ದಾ.ಮಾ. ರವೀಂದ್ರ ಬಿಡುಗಡೆಗೊಳಿಸಿದರು. ಮಂಜುಳಾ ಪ್ರಸಾದ್ ಪ್ರಸ್ತಾವನೆಗೈದರು.