100 ವರ್ಷಗಳ ಬಳಿಕ ಅಪರೂಪದ ಪಂಚಗ್ರಹ ಯೋಗ ರಚನೆ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs
Published on

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ ಪಾಸಿಟಿವ್​ ಹಾಗೂ ನೆಗೆಟಿವ್​ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಅಂದಹಾಗೆ, ಏಪ್ರಿಲ್​ನಿಂದ ಮೇ ತಿಂಗಳವರೆಗಿನ ಅವಧಿಯನ್ನು ಜ್ಯೋತಿಷ್ಯದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೇನೆಂದರೆ, ಈ ವರ್ಷ 100 ವರ್ಷಗಳ ನಂತರ ಎಲ್ಲ 5 ಗ್ರಹಗಳು ಅಂದರೆ, ಶನಿ, ಸೂರ್ಯ, ಬುಧ, ಶುಕ್ರ ಮತ್ತು ರಾಹು ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಪ್ರಯಾಣಿಸಲಿವೆ.

ಇದೊಂದು ಅಪರೂಪದ ಸಂಯೋಜನೆಯಾಗಿದ್ದು, ಇದರಿಂದ ಕೆಲವು ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯಬಹುದು. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಮಕರ ರಾಶಿ

ಮಕರ ರಾಶಿಯ 3ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳುತ್ತದೆ. ಇದು ಅವರನ್ನು ಯಾವುದೇ ಕೆಲಸದಲ್ಲಿ ಯಶಸ್ವಿಯಾಗಿಸುತ್ತದೆ. ವ್ಯವಹಾರದಲ್ಲಿ ದೊಡ್ಡ ಲಾಭ ಗಳಿಸುವ ಹೆಚ್ಚಿನ ಅವಕಾಶವಿದೆ. ನಿಮ್ಮ ಕುಟುಂಬದೊಂದಿಗೆ ಕಳೆಯಲು ನಿಮಗೆ ಹೆಚ್ಚಿನ ಸಮಯ ಸಿಗುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಕನಸು ಈಗ ನನಸಾಗಲಿದೆ. ಭಾಗ್ಯದ ಬಾಗಿಲು ತೆರೆಯುತ್ತದೆ ಮತ್ತು ಹಣದ ಮಳೆಯಾಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯ 7ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳುತ್ತದೆ. ಇದು ಈ ರಾಶಿಚಕ್ರ ಚಿಹ್ನೆಗಳ ಪ್ರೇಮ ಜೀವನವನ್ನು ಉತ್ತಮಗೊಳಿಸುತ್ತದೆ. ಇನ್ನೂ ಮದುವೆಯಾಗದವರಿಗೆ ಒಳ್ಳೆಯ ವರ ಸಿಗುತ್ತಾನೆ. ಆದರೆ ಸಮಸ್ಯೆಗಳಿಂದ ದೂರವಿರುವುದು ಸೂಕ್ತ. ವೃತ್ತಿಪರವಾಗಿ, ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಬಹುಕಾಲದ ಕನಸು ನನಸಾಗುತ್ತದೆ. ಆರ್ಥಿಕ ಪ್ರಗತಿಗೆ ಹಲವು ಅವಕಾಶಗಳು ಉದ್ಭವಿಸುತ್ತವೆ.

ಮಿಥುನ ರಾಶಿ

ಮಿಥುನ ರಾಶಿಯ 10ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳುತ್ತದೆ. ನೀವು ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳಿಂದ ಸ್ನೇಹವನ್ನು ಪಡೆಯುತ್ತೀರಿ. ಈ ರೀತಿಯಾಗಿ ನೀವು ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ಕೆಲಸಕ್ಕೆ ಉತ್ತಮ ಪ್ರಶಂಸೆ ದೊರೆಯುತ್ತದೆ. ನಿಮ್ಮ ಕೆಲಸದಲ್ಲಿ ಸಂಬಳ ಹೆಚ್ಚಾಗಲಿದೆ. ವಿದೇಶ ಪ್ರಯಾಣಕ್ಕೆ ಹಲವು ಅವಕಾಶಗಳು ದೊರೆಯುತ್ತವೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net