ಮುಂಬೈ: ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ ಕಲ್ಕಿ 2898 AD ಜೂನ್ 27ರಂದು ರಿಲೀಸ್ ಆಗಿದೆ. ಬಿಡುಗಡೆಯಾದಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಮುಂತಾದ ತಾರೆಯರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಸಿನಿಮಾ ವೀಕ್ಷಿಸಲು ಕುಟುಂಬಸ್ಥರೊಂದಿಗೆ ಬಂದಿದ್ದ ನಟಿ ದೀಪಿಕಾ ಪಡುಕೋಣೆ ಮುಂಬೈನ ಮಾಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ: ಸೋನಾಕ್ಷಿ ಸಿನ್ಹಾ ಮದುವೆಗೆ ಬಾರದಿರಲು ಇದೇ ಕಾರಣ ಎಂದ ನಟಿಯ ಸಹೋದರ ಲವ್ ಸಿನ್ಹಾ
ವಿಶೇಷ ಸ್ಕ್ರೀನಿಂಗ್ನಲ್ಲಿ ಪತಿ ರಣವೀರ್ ಸಿಂಗ್, ಅತ್ತೆ ಅಂಜು ಭವ್ನಾನಿ ಮತ್ತು ರಿತಿಕಾ ಭವ್ನಾನಿ ಅವರ ಜತೆ ದೀಪಿಕಾ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಲು ಬಂದಿದ್ದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಪ್ರತ್ಯೇಕ ವಾಹನಗಳಲ್ಲಿ ಇಳಿಯುತ್ತಿರುವುದು ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಕಂಡುಬಂದಿದೆ.
ಕಲ್ಕಿ 2898 AD ನೋಡಿದ ಬಳಿಕ ರಣವೀರ್ ಸಿಂಗ್ ಚಿತ್ರವನ್ನು ಮೆಚ್ಚಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ. ಸಿನಿಮಾ ತಂಡದಲ್ಲಿನ ಎಲ್ಲರನ್ನು ಹೊಗಳಿದ್ದಾರೆ. ಕಲ್ಕಿ 2898 AD ಒಂದು ಅತ್ಯದ್ಭುತ ಸಿನಿಮೀಯ ದೃಶ್ಯವನ್ನು ಹೊಂದಿರುವ ದೊಡ್ಡ ಪರದೆಯ ಸಿನಿಮಾ! ತಾಂತ್ರಿಕ ನಿರ್ವಹಣೆಯಲ್ಲಿ ಅಭೂತಪೂರ್ವ ಮಟ್ಟದ ಕೌಶಲ. ನಾಗಿ ಸರ್ ಮತ್ತು ತಂಡಕ್ಕೆ ಅಭಿನಂದನೆಗಳು! ಪ್ರಭಾಸ್ – ರೆಬೆಲ್ ಸ್ಟಾರ್ ರಾಕಿಂಗ್! ಕಮಲ್ ಹಾಸನ್ ಉಲಗನಾಯಗನ್ ಎಂದೆಂದಿಗೂ ಸರ್ವಶ್ರೇಷ್ಠ! ನೀವು ನನ್ನಂತಹೇ ಅಮಿತಾಬ್ ಬಚ್ಚನ್ ಅಭಿಮಾನಿಯಾಗಿದ್ದರೆ ನೀವು ಸಿನಿಮಾ ನೋಡುವುದನ್ನು ತಪ್ಪಿಸಿಕೊಳ್ಳಬಾರದು! ನನ್ನ ಪ್ರೀತಿಯ ದೀಪಿಕಾ ಪಡುಕೋಣೆ ಪಾತ್ರವನ್ನು ಪ್ರತಿ ಕ್ಷಣದಲ್ಲು ಹೆಚ್ಚಿಸಿದ್ದೀರಿ ಎಂದಿದ್ದಾರೆ.
ದೀಪಿಕಾ ಮತ್ತು ರಣವೀರ್ ಬಿ-ಟೌನ್‌ನ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಈ ಜೋಡಿಯನ್ನು ‘ದೀಪ್ವೀರ್’ ಎಂದು ಕರೆಯಲಾಗುತ್ತದೆ. ದೀಪಿಕಾ ಪಡುಕೋಣೆ ನಟಿಸಿರುವ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಸಿಂಗಮ್ ಎಗೇನ್ ನವೆಂಬರ್ 1ರಂದು ತೆರೆ ಕಾಣಲಿದೆ. ಸಿನಿಮಾದಲ್ಲಿ ದೀಪಿಕಾ ಮತ್ತು ರಣವೀರ್ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
ಗುಜರಾತ್ ಕಾಂಗ್ರೆಸ್ ಕಚೇರಿ ಮೇಲೆ ದಾಳಿ; ರಾಹುಲ್ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ..