ಮಲೆನಾಡಿನಲ್ಲಿ ನಡೆಯುವ ನಿಗೂಢ ಘಟನೆಗಳ ಸುತ್ತ…; 'ಶಾಖಾಹಾರಿ' ರಂಗಾಯಣ ರಘು

RR_
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಂಗಾಯಣ ರಘು ನಾಯಕನಾಗಿ ನಟಿಸುತ್ತಿರುವ, ಸಂದೀಪ್ ಸುಂಕದ್ ನಿರ್ದೇಶಿಸುತ್ತಿರುವ ಚಿತ್ರ ‘ಶಾಖಾಹಾರಿ’. ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿ, ಸಹ-ನಿರ್ದೇಶಕರಾಗಿ ಅನುಭವ ಪಡೆದಿರುವ ಸಂದೀಪ್‌ಗೆ ‘ಶಾಖಾಹಾರಿ’ ಮೊದಲ ನಿರ್ದೇಶನದ ಸಿನಿಮಾ. ಮಲೆನಾಡಿನ ತೀರ್ಥಹಳ್ಳಿ ಊರೊಂದರಲ್ಲಿ ನಡೆಯುವ ಕೆಲವು ನಿಗೂಢ ಘಟನೆಗಳ ಸುತ್ತ ಚಿತ್ರದ ಕಥೆ ಹೆಣೆದಿದ್ದಾರೆ ಸಂದೀಪ್.

ರಂಗಾಯಣ ರಘು ಹೋಟೆಲ್‌ನಲ್ಲಿ ಅಡುಗೆ ಮಾಡುವ ಭಟ್ಟನ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಅವರ ಸ್ಟ್ ಲುಕ್ ರಿಲೀಸ್ ಮಾಡಿದೆ. ಈ ಮಲೆನಾಡಿನ ಕಥೆಯ ಚಿತ್ರೀಕರಣವೂ ಸಂಪೂರ್ಣವಾಗಿ ಮಲೆನಾಡಿನಲ್ಲಿಯೇ ನಡೆದಿದ್ದು, ಅಲ್ಲಿನ ಅನೇಕ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸುತ್ತಿದ್ದು, ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಪ್ರಮುಖ ತಾರಾಗಣದಲ್ಲಿದ್ದಾರೆ.

ಉಳಿದಂತೆ ಚಿತ್ರಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನವಿರಲಿದೆ. ಈಗಾಗಲೇ ‘ಶಾಖಾಹಾರಿ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net